ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.14ರಿಂದ ಜ. 22ರ ತನಕ ನಡೆಯಲಿರುವ ಕಾಲಾವಧಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಜ.2ರಂದು ಗೊನೆ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ಸದಾಶಿವ ವಿ.ಆರ್ ವಿಟ್ಲ ಅರಮನೆ, ಕೃಷ್ಣಯ್ಯ ಕೆ. ಶ್ರೀಕಂಠ ವರ್ಮ, ಜಯರಾಮವರ್ಮ, ಆರುಣ್ ಕುಮಾರ್ ವರ್ಮ, ಅನಂತ್ ಪ್ರಸಾದ್, ನಾಗರಾಜ್, ಪದ್ಮನಾಭಗೌಡ ಮಂಜಲಾಡಿ, ರಾಮಣ್ಣಗೌಡ, ಗಿರಿಯಪ್ಪಗೌಡ, ಕರುಣಾಕರಗೌಡ, ವಸಂತ, ಪುರುಶೋತ್ತಮ, ಮೋಹನ್ ಕಟ್ಟೆ, ಸಂತೋಷ್ ಗೌಡ, ಗಣೇಶ ಸೇರಿದಂತೆ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.