ಪುತ್ತೂರು:ಹೊಸಮನೆ ಕ್ರಿಕೆಟರ್ಸ್ ಆರ್ಯಾಪು ಇದರ ಆಶ್ರಯದಲ್ಲಿ ಆರ್ಯಾಪಿನ ಇತಿಹಾಸದಲ್ಲೇ ಫೆ.8 ಮತ್ತು 9ರಂದು ಕಾರ್ಪಾಡಿ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ನಡೆಯಲಿರುವ 10 ತಂಡಗಳ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ `ಆರ್ಯಾಪು ಪ್ರೀಮಿಯರ್ ಲೀಗ್’ನ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕ್ರಿಕೆಟ್ ಆಟಗಾರರ ಹರಾಜು ಪ್ರಕ್ರಿಯೆಗಳು ಜ.5ರಂದು ಬೊಳುವಾರು ಮಹಾವೀರ ವೆಂಚರ್‌ನಲ್ಲಿ ನಡೆಯಿತು.
ಉದ್ಯಮಿ ಸಹಜ್ ರೈ ಬಳಜ್ಜ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ರಾಮ್ ದಾಸ್ ಶೆಟ್ಟಿ, ಅತಿಥಿಗಳಾಗಿ ಆಗಮಿಸಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಬಳಿಕ ನಡೆದ ಆಟಗಾರರ ಹರಾಜು ಪ್ರಕ್ರೀಯೆಯಲ್ಲಿ, ಪಂದ್ಯಾಟದಲ್ಲಿ ಭಾಗವಹಿಸಲಿರುವ ತಂಡದ ಮ್ಹಾಲಕರಾದ ಟೀಮ್ ವಿಷ್ಣುಮೂರ್ತಿ ಸಂಪ್ಯ ತಂಡದ ಡಾ.ಸುರೇಶ್ ಪುತ್ತೂರಾಯ, ಹೊಸಮನೆ ಕ್ರಿಕೆಟರ್ಸ್‌ನ ಗಂಗಾಧರ ಅಮೀನ್ ಹೊಸಮನೆ, ಟೀಮ್ ರತ್ನಶ್ರೀ ಪುತ್ತೂರು ಇದರ ಜಯಂತ ಶೆಟ್ಟಿ ಕಂಬಳತ್ತಡ್ಡ, ಶ್ರೀದತ್ತ ಕ್ರಿಕೆಟರ್ಸ್ ನ ನಿತಿನ್ ಪಕ್ಕಳ, ಟೀಮ್ ಎಸ್‌ಸಿ ಇದರ ಪ್ರೀತಮ್ ಮೇರ್ಲ, ಟೀಮ್ ಕಾರ್ಪಾಡಿಯ ಬಾಲಚಂದ್ರ ಗೌಡ, ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್& ಆರ್ಟ್ಸ್ ಕ್ಲಬ್ ಪುತ್ತುರು ಇದರ ಶರತ್ ಆಳ್ವ ಕೂರೇಲು, ಆರ್ಯನ್ ಮೂನ್‌ಸ್ಟಾರ್ ಮೇರ್ಲ ಇದರ ಸಂತೋಷ್ ಸುವರ್ಣ ಮೇರ್ಲ, ಸ್ವರ್ಣ ಸ್ಟೈಕರ್‌್ರನ ಸುರೇಶ್ ಪೆಲತ್ತಡಿ ಹಾಗೂ ಮರಕ್ಕ ಚಾಲೆಂಜರ್‌ನ ನರೇಂದ್ರ ನಾಯಕ್ ಮರಕ್ಕೆ ಭಾಗವಹಿಸಿದ್ದರು.
ಹೊಸಮನೆ ಕ್ರಿಕೆಟರ್ಸ್‌ನ ಅಧ್ಯಕ್ಷ ಧನುಷ್ ಹೊಸಮನೆ, ಕಾರ್ಯದರ್ಶಿ ಪವನ್ ಶೆಟ್ಟಿ ಕಂಬಳತ್ತಡ್ಡ, ಉಪಾಧ್ಯಕ್ಷರಾದ ಪ್ರಜ್ವಲ್ ಎಂ.ಎಸ್, ಉಮೇಶ್ ಎಸ್.ಕೆ., ಜತೆ ಕಾರ್ಯದರ್ಶಿ ಯತೀಶ್ ಪಿ.ಕೆ., ಮನೋಜ್ ಪೂಜಾರಿ, ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ, ಸದಸ್ಯರಾದ ಹರಿಪ್ರಸಾದ್ ಕೆಯ್ಯರು, ಸೃಜನ್ ರೈ ಮೊದಲಾದವರು ಉಪಸ್ಥಿತರಿದ್ದರು. ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


























