ವಿಟ್ಲ ಜೆಸಿಐ ಘಟಕದ 2025 ಸಾಲಿನ ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿಟ್ಠಲ ಜೇಸೀಸ್ ಶಾಲಾ ಜೇಸೀ ಪೆವಿಲಿಯನಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಮಾಜಿ ವಲಯಾಧ್ಯಕ್ಷ ಕೃಷ್ಣ ಮೋಹನ್, ಮತ್ತು ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಡಾ ಗೀತಪ್ರಕಾಶ್ ಭಾಗವಹಿಸಿದ್ದರು.

ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲೂವಿಸ್ ಮಸ್ಕರೇನಸ್, ಜೆಜೆಸಿ ಅಧ್ಯಕ್ಷೆ ಸಾನ್ವಿ, ಜೆಸಿಐ ನೂತನ ಅಧ್ಯಕ್ಷೆ ಸೌಮ್ಯ ಚಂದ್ರಹಾಸ, ಕಾರ್ಯದರ್ಶಿ ಹೇಮಲತಾ ಜೈಕಿಶನ್, ಕೋಶಾಧಿಕಾರಿ ಹರ್ಷಿತ್ ಕುಮಾರ್, ಸಿಂಧು ಶೆಟ್ಟಿ, ಅಶ್ವಿನಿ ದಿನೇಶ್ ಶೆಟ್ಟಿ, ಪರಮೇಶ್ವರ ಹೆಗ್ಡೆ, ಶಾನ್ ಲೆವಿನ್ ಮಸ್ಕರೇನಸ್, ಸಂದೀಪ್ ವಿಟ್ಲ, ವಿಟ್ಠಲ ಜೇಸೀಸ್ ಶಾಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಪ್ರಿನ್ಸಿಪಾಲ್ ಜಯರಾಮ ರೈ, ಕಾರ್ಯದರ್ಶಿ ಮೋಹನ್ ಮೈರ, ಕೋಶಾಧಿಕಾರಿ ಪ್ರಭಾಕರ ಶೆಟ್ಟಿ, ದೀಕ್ಷಿತ್, ಹಾರ್ದಿಕ್, ನವೀನ್ ಚಂದ್ರ, ಫ್ಲವಿಟಾ, ರಾಧಾಕೃಷ್ಣ ಎರುಂಬು ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.



























