ಪುತ್ತೂರು: ಭಾರತ್ಸ್ ಫ್ರೆಶ್ ಚಿಕನ್ ಸಂಸ್ಥೆಯ 14 ನೇ ಶಾಖೆ ಜ.11 ರಂದು ಪುತ್ತೂರಿನ ಮುಖ್ಯರಸ್ತೆಯಲ್ಲಿರುವ G L Mall ನ ಸಮೀಪದ ಮಹಾಲಸ ಆರ್ಕೇಡ್ ನ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ನೂತನ 14 ನೇ ಶಾಖೆಯನ್ನು ನಗರಸಭಾ ಪೌರಾಯುಕ್ತರಾದ ಮಧು ಎಸ್ ಮಹೋಹರ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಯಾಗಿ ತಾಲೂಕು ಆರೋಗ್ಯಾಧಿಕಾರಿಗಿರುವ ಡಾ. ದೀಪಕ್ ರೈ ಭಾಗವಹಿಸಲಿದ್ದಾರೆ.

ಕರಾವಳಿ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಹಾಗೂ ವೃತ್ತಿಪರ ಕುಕ್ಕುಟ ಉದ್ಯಮದ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರತ್ ಆಗ್ರೊವೆಟ್ ಇಂಡಸ್ಟ್ರೀಸ್ ಪ್ರೈ. ಲಿ ಸಂಸ್ಥೆಯು ಉತ್ತರ ಕೇರಳ ಹಾಗೂ ಕರ್ನಾಟಕ ರಾಜ್ಯಾದ್ಯಂತ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.
Breeding Farms, Hatcheries, Contract Boiler Farms, ಕೋಳಿ ಆಹಾರ ಉತ್ಪಾದನಾ ಘಟಕ, ಕೋಳಿ ಮಾಂಸ ಸಂಸ್ಕರಣಾ ಘಟಕ, ಕೋಳಿಮಾಂಸ ಮಾರಾಟ ಕೇಂದ್ರ ಹೀಗೆ ಉದ್ಯಮದ ಹಲವು ವಿಭಾಗಗಳಲ್ಲಿ ಸಂಸ್ಥೆಯು ತೊಡಗಿಸಿಕೊಂಡಿದೆ.
ಪ್ರಸ್ತುತ ಪಂಪ್ವೆಲ್ , ಪಾಂಡೇಶ್ವರ, ಕೊಂಚಾಡಿ , ಬೋಳಾರ, ಬಲ್ಲಾಲ್ ಬಾಗ್,ಕದ್ರಿ, ಗಂಜಿಮಠ, ಉಡುಪಿ, ಮೂಡಬಿದ್ರೆ, ಮಣಿಪಾಲ್, ಪದವಿನಂಗಡಿ, ಮೋರ್ಗನ್ ಗೇಟ್, ಮತದಕಣಿ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು ಇದೀಗ 14 ನೇ ಶಾಖೆ ಪುತ್ತೂರಿನಲ್ಲಿ ಶುಭಾರಂಭ ಗೊಳ್ಳುತ್ತಿದ್ದು ಚಿಕನ್ ಪ್ರಿಯರಿಗೆ ಸಂತಸ ತಂದಿದೆ.