ಕರಾವಳಿಯು ಕಲ್ಪವೃಕ್ಷವಾದ ತೆಂಗಿನ ಮರಗಳ ನಾಡು. ತೆಂಗಿನಕಾಯಿಯಲ್ಲಿರುವ ಹಲವು ಪ್ರಯೋಜನಗಳನ್ನು ಜನರಿಗೆ ಶುದ್ಧ ತೆಂಗಿನ ಎಣ್ಣೆಯ ಮೂಲಕ ತಲುಪಿಸಬಹುದು. ಈ ನಿಟ್ಟಿನಲ್ಲಿ 1988 ಜನವರಿ 8 ರಂದು ಶಿವಶಂಕರ ಭಟ್ ಬೋನಂತಾಯ ಅವರು ತಮ್ಮ ಹುಟ್ಟೂರಾದ ಪುತ್ತೂರಿನ ಪರ್ಲಡ್ಕದಲ್ಲಿ ಪ್ರಾರಂಭಿಸಿದ್ದೇ ಶ್ರೀರಾಮ ಎಣ್ಣೆ ಮಿಲ್.
ಮೊದಲಿಗೆ ಕೊಬ್ಬರಿಯ ಖರೀದಿ ಹಾಗೂ ತೆಂಗಿನ ಎಣ್ಣೆ ಮಾರಾಟ, ಜಾಬ್ ವರ್ಕ್ ಸೇವೆಗಳನ್ನು ಏಳ್ಮುಡಿಯ ಭಟ್ ಬಿಲ್ಡಿಂಗ್ ನ ಬಾಡಿಗೆ ಕೊಠಡಿಯಲ್ಲಿ ನೀಡಲಾರಂಭಿಸಿದರು. ಜೊತೆಗೆ ತೆಂಗಿನ ಹಿಂಡಿಯನ್ನು ಕೂಡ ಹಸುವಿನ ಮೇವಾಗಿ ಮಾರಾಟ ಮಾಡಲು ಆರಂಭಿಸಿದರು.
ಸಾಲಮಾಡಿ ಕೇವಲ ಒಂದು ಗಾಣದಿಂದ ಶುರುವಾದ ಈ ವ್ಯಾಪಾರದಲ್ಲಿ ಶಿವಶಂಕರ್ ಭಟ್ ಬೋನಂತಾಯ ಹಾಗೂ ಅವರ ಪತ್ನಿ ಗಾಯತ್ರಿ ದೇವಿ ಬೋನಂತಾಯ ಅವರಿಗೆ ಎರಡು ಮಕ್ಕಳ ಲಾಲನೆ ಪಾಲನೆಯೊಂದಿಗೆ ಎದುರಾದದ್ದೆಲ್ಲಾ ಕಷ್ಟದ ದಿನಗಳೇ. ಆಕಸ್ಮಿಕ ಬೆಂಕಿಯ ಅವಘಡ, ಕೆಲಸಗಾರರಿಂದಲೆ ಕಳ್ಳತನ ಈ ಎಲ್ಲಾ ಸಮಸ್ಯೆಗಳಿಗೆ ಜಗ್ಗದೆ, ನಂಬಿಕಸ್ತ ಕೆಲಸಗಾರರು ಹಾಗೂ ಕುಟುಂಬದ ಸಹಕಾರದಿಂದ ಈ ವ್ಯವಹಾರ ಕ್ಷೇತ್ರದಲ್ಲಿ ತಲೆಯೆತ್ತಿ ನಿಂತರು. ಉತ್ತಮ ಗುಣಮಟ್ಟದ ತೆಂಗಿನ ಎಣ್ಣೆಯ ಉತ್ಪನ್ನವೆಂದು ಮಾರುಕಟ್ಟೆಯಲ್ಲಿ ಜನಮನ್ನಣೆಗಳಿಸಿದರು.ಸುತ್ತಮುತ್ತಲಿನ ಐವತ್ತು ಕಿಲೋಮೀಟರ್ ಪ್ರದೇಶಗಳಲ್ಲಿ ಶ್ರೀ ರಾಮ ತೆಂಗಿನ ಎಣ್ಣೆ ಎಂದರೆ ಪರಿಶುದ್ಧ ತೆಂಗಿನ ಎಣ್ಣೆ ಎಂದೇ ಹೆಸರುವಾಸಿ ಆಯ್ತು.
ಶ್ರೀ ರಾಮ ಎಣ್ಣೆ ಮಿಲ್ ನ ಹೊಸ ಉತ್ಪನ್ನಗಳು ಹಾಗೂ ಸೇವೆಗಳು
ಸಂತೋಷ್ ಬ್ರಾಂಡ್ ನ ಪಾಕೆಟ್ ಳು
ಶ್ರೀರಾಮ ಎಣ್ಣೆ ಮಿಲ್ಲಿನ ಸೇವೆಯಲ್ಲಿ ತೆಂಗು ಬೆಳೆಗಾರರು ತಮ್ಮದೇ ಕೊಬ್ಬರಿಯಿಂದ ಉತ್ತಮ ಬೆಲೆಗೆ ಎಣ್ಣೆಯನ್ನು ತೆಗೆಯುತ್ತಿದ್ದರು. ಇದರೊಂದಿಗೆ ತೆಂಗಿನ ಎಣ್ಣೆಯನ್ನು ಕಿರಾಣಿ ಅಂಗಡಿಯ ಮೂಲಕ ಜನರು ಖರೀದಿಸಲು ಸಂತೋಷ್ ಬ್ರಾಂಡ್ ನ ಪಾಕೆಟ್ ಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದರು. ಇದರಿಂದಾಗಿ ರಿಟೇಲ್ ಮಾರುಕಟ್ಟೆಯಲ್ಲಿ ಶ್ರೀರಾಮ ಆಯಿಲ್ ಮಿಲ್ ನ ಎಣ್ಣೆ ಹೆಚ್ಚು ಪ್ರಚಲಿತಕ್ಕೆ ಬರಲು ಸಾಧ್ಯವಾಯಿತು. 2006 ರಂದು ಕಿರಿಯ ಮಗನಾದ ಸಂತೋಷ ಬೋನಂತಾಯ ಅವರು ಈ ವ್ಯವಹಾರದಲ್ಲಿ ಕೈ ಜೋಡಿಸುವುದರೊಂದಿಗೆ ಹೊಸ ಪೀಳಿಗೆಯ ಒಳಗೊಳ್ಳುವಿಕೆಯ ಪ್ರಮುಖ ಮೈಲಿಗಲ್ಲು ಶ್ರೀ ರಾಮ ಎಣ್ಣೆ ಮಿಲ್ಲಿನದ್ದಾಗಿದೆ.
ಕೊಕೊಗುರು – ಸಂಪ್ಯದಲ್ಲಿ ನೂತನ ತೈಲ ಉತ್ಪಾದನ ಘಟಕ
2009 ರಿಂದ ಹಿರಿಯ ಮಗ ಕೇಶವ ರಾಮ ಬೋನಂತಾಯ ಅವರು ಈ ವ್ಯವಹಾರ ಕ್ಷೇತ್ರಕ್ಕೆ ಕಾಲಿರಿಸಿದರು. 2011ರಲ್ಲಿ ಕೊಕೊಗುರು ಟ್ರೇಡ್ ಮಾರ್ಕ್ ನೊಂದಿಗೆ ಆಧುನಿಕ ಯಂತ್ರಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ರೋಸ್ಟೆಡ್ ತೆಂಗಿನೆಣ್ಣೆಯನ್ನು ತಯಾರಿಸುವ ತೈಲ ಘಟಕವನ್ನು ಸಂಪ್ಯದ ಕಲ್ಲರ್ಪೆಯಲ್ಲಿ ಪ್ರಾರಂಭಿಸಿದರು. 2012ರಿಂದ ಕೊಕೊಗುರು ಉತ್ಪನ್ನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾರಟ ಮಾಡಲಾಯಿತು. ಪ್ರಸ್ತುತ ಉಡುಪಿ ಕೊಡಗು ಚಿಕ್ಕಮಗಳೂರು ಮತ್ತು ಬೆಂಗಳೂರಿನವರೆಗೂ ಕೊಕೊಗುರು ಉತ್ಪನ್ನಗಳು ವಿತರಕರು ಹಾಗೂ ಕಿರಾಣಿ ಅಂಗಡಿಗಳ ಮೂಲಕ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈಗ ಆನ್ಲೈನ್ ನಲ್ಲಿ ಕಂಪನಿಯ Website(cocoguru.com), Amazon, Flipkart, Jiomart ನಲ್ಲಿ ಲಭ್ಯವಿದೆ.
ನೂತನ ಕೊಕೊನಟ್ ಡ್ರೈಯರ್
ಶ್ರೀ ರಾಮ ಎಣ್ಣೆ ಮಿಲ್ ನಲ್ಲಿ ಖರೀದಿಸಿದ ತೆಂಗಿನಕಾಯಿಗಳನ್ನು ಒಣಗಿಸಲು, ಸಂಸ್ಕರಿಸಲು ಹಾಗೂ ಗುಣಮಟ್ಟದ ಅನುಸಾರ ಬೇರ್ಪಡಿಸಿ ಮಾರಾಟ ಮಾಡಲು, ಸಾವಿರಾರು ತೆಂಗಿನಕಾಯಿಗಳನ್ನು ಶೇಖರಿಸಲು ಡ್ರೈಯರ್ ನ ಅನುಕೂಲವಿರುವ ದೊಡ್ಡ ಉಗ್ರಾಣವನ್ನು 2016ರಂದು ಶುರು ಮಾಡಲಾಯಿತು. ಇಲ್ಲಿ 20,000ಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಇಲ್ಲಿ ಸಂಸ್ಕರಿಸಬಹುದು.
ಗೃಹ ಉತ್ಪನ್ನಗಳು
ತೆಂಗಿನ ಎಣ್ಣೆಯ ಉತ್ಪನ್ನಗಳೊಂದಿಗೆ ಶಿವಶಂಕರ ಭಟ್ ಬೋನಂತಾಯ ಅವರ ಮನೆಯ ಪರಿಸರದಲ್ಲಿ ಹಾಗೂ ತೋಟದಲ್ಲಿ ಅವರ ಧರ್ಮಪತ್ನಿಯಾದ ಗಾಯತ್ರಿ ದೇವಿ ಬೋನಂತಾಯ ಅವರು ಸಾವಯವ ತರಕಾರಿಗಳನ್ನು ಬೆಳೆಸಲಾರಂಭಿಸಿದರು. ಇದರೊಂದಿಗೆ ಹೈನುಗಾರಿಕೆಯು ಚಾಲನೆಯಾಯ್ತು.
ಮನೆಯಲ್ಲೇ ಬೆಳೆದ ತರಕಾರಿಗಳು, ಮಾವು, ಹಲಸು ಖರೀದಿಗೆ ಲಭ್ಯವಿದೆ. ಜೊತೆಗೆ ಮನೆಯಲ್ಲೇ ತಯಾರಿಸಿದ ಅರಿಶಿಣ ಹುಡಿ, ಕಷಾಯ ಹುಡಿ, ಉಂಡೆ ಹುಳಿ, ಗಿಡಮೂಲಿಕೆಯ ಕೇಶತೈಲ, ಜೇನುತುಪ್ಪ ಹಾಗೂ ಶುದ್ಧ ದೇಶಿಯ ದನದ ತುಪ್ಪ, ಗೋ ಅರ್ಕ ಇನ್ನಿತರ ಗೃಹ ಉತ್ಪನ್ನಗಳನ್ನು ಪರಿಚಯಿಸಿದ್ದಾರೆ.
ಕೊಕೊಗುರು ಅಡಿಗೆಮನೆ
2023 ರಂದು ಪುತ್ತೂರಿನ ನೆಹರೂ ನಗರದಲ್ಲಿ ಶುದ್ಧ ತೆಂಗಿನ ಎಣ್ಣೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಮಂಗಳೂರು ಶೈಲಿಯ ಸಸ್ಯಾಹಾರ ಖಾದ್ಯಗಳನ್ನು ಜನರಿಗೆ ನೀಡಲು ಕೊಕೊಗುರು ಅಡಿಗೆಮನೆ ಉಪಾಹಾರ ಗೃಹವನ್ನು ಆರಂಭಿಸಿದರು. ಗುಣಮಟ್ಟದ ಪದಾರ್ಥಗಳೊಂದಿಗೆ ಬಳಸಿ ಆರೋಗ್ಯಕರ ಆಹಾರವನ್ನು ಉಣಬಡಿಸುವುದರೊಂದಿಗೆ ಶುಚಿ ಹಾಗೂ ತಾಜಾ ಆಹಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತೆಂಗಿನ ಎಣ್ಣೆಯಲ್ಲಿ ಕರಿದ ತಿನಿಸುಗಳು
2024 ರಿಂದ ನೈಟ್ರೋಜನ್ ಪೌಚ್ ಗಳಲ್ಲಿ ಪ್ಯಾಕ್ ಮಾಡಲಾದ ಬಾಳೆಕಾಯಿ, ಆಲೂ, ಹಲಸು, ಮರಗೆಣಸು, ಗೆಣಸು ಹಾಗೂ ಜೀಗುಜ್ಜೆ ಚಿಪ್ಸ್ ಗಳು, ಮುರುಕು, ಹುರಿದ ಕಡ್ಲೆ , ಖಾರದ ಕಡ್ಡಿ, ನಿಪ್ಪಟ್ಟು, ಸೇವ್, ತೆಂಗೊಳಲು, ಮುರುಕು, ತುಕ್ಕುಡಿ, ಕೋಡುಬಳೆ ಹೀಗೆ ಬಗೆ ಬಗೆಯ ತೆಂಗಿನ ಎಣ್ಣೆಯಲ್ಲಿ ಕರಿದ ತಿನಿಸುಗಳೊಂದಿಗೆ ಸಾವಯವ ಬೆಲ್ಲದಿಂದ ತಯಾರಿಸಿದ ಎಳ್ಳುಂಡೆ, ನೆಲಕಡಲೆ ಉಂಡೆ, ತಂಬಿಟ್ಟು, ಶುದ್ಧ ತುಪ್ಪದಿಂದ ತಯಾರಿಸಿದ ಮೈಸೂರು ಪಾಕ್, ಹಲ್ವಾ ಈ ರೀತಿ ಹೊಸ ಬೇಕರಿ ಉತ್ಪನ್ನಗಳನ್ನು ಪರಿಚಯಿಸಿದ್ದಾರೆ.
ಕೌಟುಂಬಿಕ ವ್ಯವಹಾರವಾದ ಶ್ರೀ ರಾಮ ಎಣ್ಣೆ ಮಿಲ್ ಕೊಕೊಗುರು ಜನವರಿ 8 2025 ರಂದು 37 ಸಂವತ್ಸರಗಳನ್ನು ಪೂರ್ಣಗೊಳಿಸಿ 38ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಶಿವಶಂಕರ್ ಭಟ್ ಬೋನಂತಾಯ ಅವರು ತಮ್ಮ ಮಕ್ಕಳೊಡನೆ ಸೇರಿ ಮುಂಬರುವ ದಿನಗಳಲ್ಲಿ ತೆಂಗಿನ ಎಣ್ಣೆ ಉತ್ಪನ್ನಗಳೊಡನೆ ಇನ್ನಷ್ಟು ಹೊಸ ಸೇವೆಗಳನ್ನು ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದಾರೆ.