ಮಲೆಯಾಳಂ ಖ್ಯಾತ ನಟಿ ಹನಿರೋಸ್ಗೆ ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಹಿಂದೆ ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ನಟಿ ಹನಿ ರೋಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಕೇರಳದ ಪ್ರಮುಖ ಆಭರಣ ವ್ಯಾಪಾರಿಯಾಗಿರೋ ಬಾಬಿ ಚೆಮ್ಮನೂರ್ ವಿರುದ್ಧ ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಪೊಲೀಸರು ವಿಚಾರಣೆ ನಡೆಸುವ ವೇಳೆ ಈ ಆರೋಪ ತಳ್ಳಿ ಹಾಕಿದ್ದಾರಂತೆ ಬಾಬಿ ಚೆಮ್ಮನೂರ್.
ಬಾಬಿ ಚೆಮ್ಮನೂರ್ ಒಬ್ಬ ಇಂಟರ್‌ನ್ಯಾಶನಲ್ ಜ್ಯುವೆಲರ್ಸ್‌ನ ಡೈರೆಕ್ಟರ್ ಆಗಿದ್ದಾರೆ. ಆಕ್ಸಿಜನ್ ರೆಸಾರ್ಟ್‌ಗಳ ಮಾಲೀಕರಾಗಿದ್ದಾರೆ. ಜೊತೆಗೆ ಲೈಫ್ ವಿಷನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಕೂಡ ಆಗಿದ್ದಾರೆ. 2012ರಲ್ಲಿ ಫುಟ್ಬಾಲ್ ದಂತಕಥೆ ಮರಡೋನಾ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೇ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿ ಕಣ್ಣೂರಿಗೆ ಕರೆತಂದಿದ್ದರು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು 812 ಕಿ.ಮೀ ಓಡಿ ವಿಶ್ವ ದಾಖಲೆ ಬರೆದಿದ್ದರು. ಯುನಿವರ್ಸಲ್ ಪೀಸ್ ಫೌಂಡೇಶನ್‌ನಿಂದ ಶಾಂತಿ ರಾಯಭಾರಿ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡರು.
2016ರಲ್ಲಿ ಶಾಂತಿ ರಾಯಭಾರಿ ಪ್ರಶಸ್ತಿ ಪಡೆದುಕೊಂಡಿದ್ದರು ಬಾಬಿ ಚೆಮ್ಮನೂರ್. ಇವರು ಸಾಕಷ್ಟು ಐಷಾರಾಮಿ ಕಾರುಗಳನ್ನ ಹೊಂದಿದ್ದಾರೆ. ಟ್ರಂಪ್ ಬಳಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಬಿಡ್ ಮಾಡಿದ್ದರು ಬಾಬಿ. ನಮ್ಮ ಮಳಿಗೆಗಳ ಉದ್ಘಾಟನೆಗಳಿಗೆ ಹನಿ ರೋಸ್ ಬರುತ್ತಿದ್ದರು. ಆಗ ನಾವು ಡ್ಯಾನ್ಸ್ ಮಾಡ್ತಿದ್ವಿ.. ಅವರಿಗೆ ಜೋಕ್ ಹೇಳುತ್ತಿದ್ದೆ. ಆದರೆ ಈಗ ನನ್ನ ವಿರುದ್ಧವೇ ದೂರು ಕೊಟ್ಟಿದ್ದಾರೆ ಅಂತಾ ಪೊಲೀಸರಿಗೆ ಬಾಬಿ ಆರೋಪ ತಳ್ಳಿ ಹಾಕಿದ್ದಾರೆ.