ಬೆಳ್ತಂಗಡಿ: ಹಿಂದೂ ಯುವನಕೊಬ್ಬನನ್ನು ಮುಸ್ಲಿಂ ಯುವತಿ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವ ಘಟನೆ ಬೆಳ್ತಂಗಡಿಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೂದನ ಗೌಡನ ಮಗ ಕೃಷಿ ಮಾಡಿಕೊಂಡಿರುವ ಹಿಂದೂ ಯುವಕ ಹರೀಶ್ ಗೌಡ(24) ಎಂಬಾತ ಫೇಸ್ ಬುಕ್ ನಲ್ಲಿ ಪರಿಚಯಾದ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಕಾರು ನಿವಾಸಿ ಯುವತಿ ಸುಹಾನ(19) ಎಂಬಾಕೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ತೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಜ.8 ರಂದು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಮುಸ್ಲಿಂ ಯುವತಿ ಕಂಪ್ಯೂಟರ್ ತರಬೇತಿಗೆ ಹೋಗುತ್ತಿದ್ದು ಈ ವೇಳೆ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ಮೂಡಬಿದಿರೆ ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದೂರು ನೀಡಿದ್ದರು.
ಈ ವೇಳೆ ಇಬ್ಬರು ಮದುವೆಯಾಗಿ ಧರ್ಮಸ್ಥಳ ಪೊಲೀಸ್ ಹಾಜರಾಗಿ ಮದುವೆಯಾಗಿರುವ ಬಗ್ಗೆ ತಿಳಿಸಿದ್ದು ಬಳಿಕ ಮೂಡಬಿದಿರೆ ಪೊಲೀಸ್ ಠಾಣೆಗೆ ಹೋಗಿ ಸ್ವ ಇಚ್ಛೆಯಿಂದ ಯುವತಿ ಮದುವೆಯಾಗಿರುವುದಾಗಿ ಜ.9 ರಂದು ಹೇಳಿಕೆ ನೀಡಿ ಪ್ರಕರಣ ಸುಖಾಂತ್ಯ ಕಂಡಿದ್ದು. ಬಳಿಕ ಯುವತಿ ಯುವಕನ ಜೊತೆ ತೆರಳಿದ್ದಾಳೆ.