ಮುಕ್ಕೂರು : ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಜ.13 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಪ್ರತಿಷ್ಠಾ ದಿನ ನಡೆಯಿತು.
ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಕಲಶಪೂಜೆ, ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಂಗಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎಂ.ಕೆ. ಬಾಲಚಂದ್ರ ರಾವ್, ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ ಜಾಲು, ಅರ್ಚಕ ಸುರೇಶ್ ಉಪಾಧ್ಯಾಯ, ಮೊಕ್ತೇಸರರಾದ ಕುಂಬ್ರ ದಯಾಕರ ಆಳ್ವ, ಡಾ.ನರಸಿಂಹ ಶರ್ಮಾ, ವಸಂತ ಬೈಪಡಿತ್ತಾಯ ಮುಕ್ಕೂರು, ಕುಶಾಲಪ್ಪ ಗೌಡ ಪೆರುವಾಜೆ, ಸುಜಾತಾ ವಿ ರಾಜ್ ಕಜೆ, ಪುಷ್ಷಾವತಿ ಕಂಡಿಪ್ಪಾಡಿ, ಕೃಷ್ಣಪ್ಪ ನಾಯ್ಕ ದೇವಿಮೂಲೆ, ಪ್ರಮುಖರಾದ ಉಮೇಶ್ ಕೆಎಂಬಿ, ನರಸಿಂಹ ತೇಜಸ್ವಿ, ರಾಮಚಂದ್ರ ಕೋಡಿಬೈಲು, ಸತ್ಯ ಪ್ರಸಾದ್ ಕಂಡಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.