ಉತ್ತರ ಕನ್ನಡ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಜಾತ್ರೆಗೆ ನುಗ್ಗಿಸಿದ್ದಾನೆ. ಪರಿಣಾಮ ಜಾತ್ರೆಗೆ ಬಂದಿದ್ದ ಯುವತಿಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅನೇಕ ಜನರು ಆಸ್ಪತ್ರೆ ಬೆಡ್ ಮೇಲೆ ಮಲಗುವಂತೆ ಮಾಡಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿರೋ ಭಯಾನಕ ಅಪಘಾತ.
ಒಂದು ಕಾರು 20ಕ್ಕೂ ಹೆಚ್ಚು ಮಂದಿಗೆ ಗಾಯ ಮಾಡಿದೆ. ಸಾಲದೂ ಎಂದು ಓರ್ವ ಯುವತಿಯ ಪ್ರಾಣವನ್ನ ತೆಗೆದಿದೆ. ಮಕರ ಸಂಕ್ರಾಂತಿ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದ ರವೀಂದ್ರ ನಗರ ಸರ್ಕಲ್ ಬಳಿ ಅಯ್ಯಪ್ಪ ಸ್ವಾಮಿ ಜಾತ್ರೆ ನಡೆಯುತ್ತಿತ್ತು. ಈ ಜಾತ್ರೆಯಲ್ಲಿ ನೂರಾರು ಜನರು ಸೇರಿದ್ದರು. ಪೊಲೀಸರು ಬ್ಯಾರಿಕೇಡ್ಗೆ ಗುದ್ದಿ ಒಳಗಡೆ ನುಗ್ಗಿದ ಕಾರು ಜಾತ್ರೆಗೆಂದು ಬಂದಿದ್ದ ಭಕ್ತರ ಮೇಲೆ ಹರಿದಿದೆ. ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ.
ದೀಪಾ ರಾಮಗೊಂಡ ವಯಸ್ಸು 21. ಇವರು ಸಿದ್ದಾಪುರದ ಕವಲಕೊಪ್ಪ ನಿವಾಸಿ. ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿತ್ತಾದ್ರೂ ದಾರಿ ಮಧ್ಯೆ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪಿಶಾಚಿ, ದೇವಸ್ಥಾನ ಮಂಟಪಕ್ಕೆ ಡಿಕ್ಕಿ ಹೊಡೆಸಿ ಜನರ ಮೇಲೆ ಕಾರು ಹತ್ತಿಸಿದ್ದಾನೆ.
ಇನ್ನು ದೇಗುಲದ ಮಂಟಪಕ್ಕೆ ಡಿಕ್ಕಿ ಹೊಡೆದವನು. ತಪ್ಪಿಸಿಕೊಳ್ಳಲು ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಭಕ್ತಾದಿಗಳು ಕಾರಿನ ಮೇಲೆ ಕಲ್ಲು ಎಸೆದು ಅಡ್ಡಹಾಕಿದ್ದಾರೆ. ಫುಲ್ ಟೈಟ್ ಆಗಿ ಕಾರು ಚಲಾಯಿಸಿದ್ದ ರೋಶನ್ ಫೆರ್ನಾಂಡಿಸ್ನನ್ನ ವಶಕ್ಕೆ ಪಡೆದಿದ್ದಾರೆ.