ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯು ಇಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಹಾಲಿ ಅಧ್ಯಕ್ಷ ನರ್ಸಪ್ಪ ಪೂಜಾರಿ ನಿಡ್ಯ , ಉಪಾಧ್ಯಕ್ಷರಾಗಿ ಮಂಜುಳ ಅವರು ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರುಗಳಾದ ಮಹಾಬಲೇಶ್ವರ ಭಟ್ ಎ, ಉದಯಕುಮಾರ್ ನಾಯ್ತೊಟ್ಟು, ಸದಾನಂದ ಗೌಡ ಸೇರಾಜೆ, ಮೋಹನದಾಸ್ ಉಕ್ಕುಡ, ರಾಘವೇಂದ್ರ ಪೈ, ದಿನೇಶ್ ಗೌಡ ಕೋಡಿಜಾಲ್, ಸಂಧ್ಯಾ ಮೋಹನ್, ವಾಸು ಸಿಎಚ್, ಹರೀಶ್ ನಾಯ್ಕ್ ಕಟ್ಟೆ, ತೀರ್ಥರಾಮ ಗೌಡ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಎನ್.ಜೆ ಗೋಪಾಲ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು, ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭುವನೇಶ್ ಸಹಕರಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳನ್ನು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ, ಜಿಲ್ಲಾ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಮಂಡಲ ಕಾರ್ಯದರ್ಶಿಗಳಾದ ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ವಿಟ್ಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯಕುಮಾರ್ ಆಲಂಗಾರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಿಎಚ್, ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಅರುಣ್ ವಿಟ್ಲ, ವಿಟ್ಲ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ಬ್ರಹ್ಮಶ್ರೀ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಂಜೀವ ಪೂಜಾರಿ, ಬಿಜೆಪಿ ಮುಖಂಡರಾದ ರಾಮದಾಸ್ ಶೆಣೈ,ಅಣ್ಣು ಪೂಜಾರಿ, ಗೋವಿಂದರಾಜ್, ವಿಟ್ಲ ಮುಡ್ನೂರು ಶಕ್ತಿಕೇಂದ್ರ ಪ್ರಮುಖ್ ಯಶೋಧರ ಪಟ್ಲ, ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಪಟ್ಲ, ಪ್ರಮುಖರಾದ ಜಯಪ್ರಕಾಶ್ ಪಾಣೆಮಜಲು, ಚಂದ್ರಹಾಸ ಸುವರ್ಣ, ಸಂಜೀವ ಪೂಜಾರಿ ಗಜಾನನ, ದಿವಾಕರ್ ಶೆಟ್ಟಿ ಅಬೀರಿ ಅಭಿನಂದಿಸಿದರು.