ಬೆಳ್ತಂಗಡಿ : ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ ಅಳದಂಗಡಿ ಇವರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿರುವ ಸುರೇಶ್ ಪೂಜಾರಿ ಅಭಿಮಾನಿ ಬಳಗದ ವತಿಯಿಂದ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಡ್ಕ ನಿವಾಸಿ ಕುಮಾರಿ ಶ್ರಾವ್ಯಳ ಚಿಕಿತ್ಸೆಯ ನೆರವಿಗೆ ಸಹಾಯಧನ ಹಸ್ತಾಂತರ ಮಾಡಲಾಯಿತು.
ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಅಶಕ್ತ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಉದ್ಯಮಿ ಸುರೇಶ್ ಪೂಜಾರಿಯವರ ಸೇವಾಮನೋಭಾವನೆಯಿಂದ ಪ್ರೇರಣೆಗೊಂಡ ಯುವಕರು ಅವರ ಮಾರ್ಗದರ್ಶನ ಪ್ರೋತ್ಸಾಹದೊಂದಿಗೆ ಸುರೇಶ್ ಪೂಜಾರಿ ಅಭಿಮಾನಿ ಬಳಗದ ಹೆಸರಿನಲ್ಲಿ ಅಶಕ್ತ ಕುಟುಂಬಗಳಿಗೆ ನೆರವಾಗಲು ಉದ್ದೇಶಿಸಿದ್ದಾರೆ.
ಸಹಾಯಧನ ಹಸ್ತಾಂತರ ಸಂದರ್ಭದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ ಕೆ ಪ್ರಸಾದ್ ತಾಲೂಕು ಯುವಬಿಲ್ಲವ ವೇದಿಕೆಯ ಕೋಶಾಧಿಕಾರಿ ಹರೀಶ್ ಕಲ್ಲಾಜೆ,ಉದ್ಯಮಿಗಳಾದ ವಿಶ್ವನಾಥ ಬಂಗೇರ ಅಳದಂಗಡಿ,ಹಿತೇಶ್ ಸಾವ್ಯ ,ಸಂತೋಷ್ ಕಟ್ಟೆ,ಆನಂದ ಪೂಜಾರಿ, ಸಂಪತ್ ಬಿರ್ವ ಕುಕ್ಕೇಡಿ ಮುಂತಾದವರು ಉಪಸ್ಥಿತರಿದ್ದರು.