ಕ್ರಿಕೆಟ್ ಪಂದ್ಯಾಟ ಫೆ.1ಮತ್ತು 2 ರಂದು ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಅಂಗಣದಲ್ಲಿ ನಡೆಯಲಿದೆ ಎಂದು ಅಭಿರಾಮ್ ಪ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷ ನವೀನ್ ರೈ ಪಂಜಳ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪಿಪಿಎಲ್ ಕ್ರಿಕೆಟ್ ಕ್ರೀಡಾಕೂಟದಲ್ಲಿ ೪ ತಾಲೂಕುಗಳ ಒಟ್ಟು ೮ ಆಹ್ವಾನಿತ ತಂಡಗಳು ಭಾಗಿಯಾಗಲಿದ್ದು, ಇದರಲ್ಲಿ ಪ್ರಥಮಸ್ಥಾನಿ ತಂಡಕ್ಕೆ ರೂ.1 ಲಕ್ಷ ಹಾಗೂ ದ್ವಿತೀಯ ಸ್ಥಾನಿಗೆ ರೂ.50 ಸಾವಿರ ಬಹುಮಾನ ನೀಡಲಾಗುವುದು.
ಪ್ರಥಮ ವಿಜೇತ ತಂಡದ ಮಾಲಕರಿಗೆ ಬೈಕ್ ಕೊಡುಗೆಯಾಗಿ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಆಟಗಾರರು ಭಾಗಿಯಾಗಲಿದ್ದಾರೆ. ಆಫಿಷಿಯಲ್ ಚಾಂಪಿಯನ್ ಟ್ರೋಫಿಯಲ್ಲಿಯೂ ತಾಲೂಕಿನ 8 ವಿವಿಧ ಇಲಾಖೆಗಳ ತಂಡಗಳು ಭಾಗಿಯಾಗಲಿವೆ ಎoದು ಅವರು ತಿಳಿಸಿದರು.
ಫೆ.1ರಂದು ಬೆಳಿಗ್ಗೆ 10 ಗಂಟೆಗೆ ಈ ಕ್ರಿಕೆಟ್ ಪಂದ್ಯಾಟವನ್ನು ಮಹಾಲಿಂಗೇಶ್ವರ ದೇವಳದ ಅರ್ಚಕರಾದ ವಸಂತ ಕೆದಿಲಾಯ ಅವರು ಉದ್ಘಾಟಿಸಲಿದ್ದಾರೆ. ನಗರಸಭಾ ಅಧ್ಯಕ್ಷತೆ ಲೀಲಾವತಿ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ 7 ಗಂಟೆಗೆ ಟ್ರೋಫಿ ಅನಾವರಣ ಸಮಾರಂಭವನ್ನು ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಭಾಗಿಯಾಗಲಿದ್ದಾರೆ.
ಫೆ.2ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ, ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅಭಿರಾಮ್ ಫ್ರೆಂಡ್ಸ್ಕ್ಲಬ್ ಅಧ್ಯಕ್ಷ ಪ್ರಜಿತ್ ಮಂಜಲ್ಪಡ್ಪು, ಉಪಾಧ್ಯಕ್ಷ ಸನತ್, ಕಾರ್ಯದರ್ಶಿ ಪ್ರಮುಖ್, ನಿಕಟಪೂರ್ವ ಅಧ್ಯಕ್ಷ ತೇಜಕುಮಾರ್ ಕೆಮ್ಮಾಯಿ ಉಪಸ್ಥಿತರಿದ್ದರು.