ರತ್ಲಂ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಶಿವಲಿಂಗದ ಮೇಲೆ ಕಾಲು ಇರಿಸಿದ್ದ ಯುವಕನ ವಿಡಿಯೋ ವೈರಲ್ ಆಗಿದೆ. ಶಿವಲಿಂಗದ ಮೇಲೆ ಕಾಲಿಟ್ಟು ರೀಲ್ಸ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಆತನನ್ನು ಬಂಧಿಸಿದ ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಜನರು ಆತನ ಮೇಲೆ ಮುಗಿಬಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಆತನನ್ನು ಕರೆದೊಯ್ಯುತ್ತಿದ್ದಾಗ ಕೋಪಗೊಂಡ ಜನರ ಗುಂಪು ಆತನ ಮೇಲೆ ದಾಳಿ ಮಾಡಿತು.
ಪೊಲೀಸರು ಕೂಡಲೆ ಮಧ್ಯಪ್ರವೇಶಿಸಿ, ಆತನನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು. ಆರೋಪಿಯನ್ನು ಇಮ್ರಾನ್ ಸುಖಾ ಎಂದು ಗುರುತಿಸಲಾಗಿದೆ. ಶಿವಲಿಂಗದ ಮೇಲೆ ತನ್ನ ಪಾದವನ್ನು ತೋರಿಸುವ ಇನ್‌ಸ್ಟಾಗ್ರಾಮ್ ವೀಡಿಯೊವನ್ನು ಚಿತ್ರೀಕರಿಸಿ ಜನವರಿ 29 (ಬುಧವಾರ)ರಂದು ಅಪ್‌ಲೋಡ್ ಮಾಡಿದ್ದ ಎಂದು ಆರೋಪಿಸಲಾಗಿದೆ.
ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ರತ್ಲಂನ ಸ್ಟೇಷನ್ ರಸ್ತೆ ಪೊಲೀಸ್ ಠಾಣೆಗೆ ರೀಲ್‌ನ ಸ್ಕ್ರೀನ್‌ಶಾಟ್‌ನೊಂದಿಗೆ ತಲುಪಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆರೋಪಿಯು ಉದ್ದೇಶಪೂರ್ವಕವಾಗಿ ಹಿಂದೂ ದೇವರನ್ನು ಅವಮಾನಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದರು.
ಈ ವಿಡಿಯೋ ಹಿಂದೂ ಸಮುದಾಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು, ಜೊತೆಗೆ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ ನೆಟಿಜನ್‌ಗಳಿಂದಲೂ ಆಕ್ರೋಶ ವ್ಯಕ್ತವಾಗಿದೆ. ಇಮ್ರಾನ್ ಈ ಹಿಂದೆ ಕೂಡ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಈ ಘಟನೆಗೆ ಕೆಲವೇ ದಿನಗಳ ಮೊದಲು ಇಮ್ರಾನ್ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.