ಪುತ್ತೂರು : ನಾನು ನನ್ನ ಜೀವಮಾನದಲ್ಲಿ ಸಂಘಟನೆಯ ಶಿಸ್ತು ಮತ್ತು ರಾಜಕೀಯವಾಗಿ ನಂಬಿಕೊಂಡು ಬಂದಿರುವಂತಹ ಪಾರ್ಟಿಯ ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಿಕೊಂಡು ಬಂದಿರುವಂತಹ ವ್ಯಕ್ತಿಯಾಗಿದ್ದು ಪುತ್ತೂರಿನ ಶಾಸಕರಾದ ಅಶೋಕ್ ರೖಯವರ ಹಾಗೆ ಗೆಲ್ಲಿನಿಂದ ಗೆಲ್ಲಿಗೆ ಹಾರುವ ರಾಜಕಾರಣಿ ಅಲ್ಲ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿಯವರು ಹೇಳಿದ್ದಾರೆ.
ನಿನ್ನೆ ವಿಟ್ಲ ಸಮೀಪದ ಚಂದಳಿಕೆಯಲ್ಲಿ ನಡೆದಿರುವಂತಹ ಯುವಕ ಮಂಡಲದ ದಶಮಾನೋತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಜನಾಂಗಕ್ಕೆ ಪೂರಕವಾಗಿ ಮಾತನಾಡಬೇಕಿದ್ದ ಶಾಸಕರು ರಾಜಕೀಯ ಮಾತನಾಡಿ ಸಾರ್ವಜನಿಕರ ಬಾಯಲ್ಲಿ ತಾನೊಬ್ಬ ಜೋಕರ್ ರಾಜಕಾರಣಿ ಎಂದು ಜನಜನಿತವಾಗಿರುವುದು ಸುಳ್ಳಲ್ಲ.
ಇತ್ತೀಚಿನ ದಿನಗಳಲ್ಲಿ ಅವರ ನಡೆಯನ್ನ ಗಮನಿಸುವಾಗ ಪುತ್ತೂರಿನಲ್ಲಿ ಕಾಂಗ್ರೇಸ್ ಪಾರ್ಟಿ ಒಂದು ಕಡೆ ಹೋಗುತ್ತಾ ಇದ್ದರೆ ಅಶೋಕ್ ರೈ ಅವರು ಇನ್ನೊಂದು ಕಡೆ ಹೋಗ್ತಾ ಇರುವುದನ್ನು ಗಮನಿಸುವಾಗ ಅವರಿಗೆ ಮುಂದಿನ ದಿನಗಳಲ್ಲಿ ಆ ಪಾರ್ಟಿಯಲ್ಲಿ ಭವಿಷ್ಯವಿಲ್ಲ ಎಂದು ಗೊತ್ತಾಗಿ ಎಲುಬಿಲ್ಲದ ನಾಲಿಗೆಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಉಜಿರೆಮಾರ್ ತಿಳಿಸಿದರು.