ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ರಾಜ್ಯಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಕಾರಣ, ಅಲ್ಲಿರುವ ಮನೆ ಒಂದರಲ್ಲಿ ಪ್ರೇತದ ಕಾಟ ಜೋರಾಗಿದೆಯಂತೆ. ಇದರಿಂದ ಇಡೀ ಊರು ಕಂಗಾಲಾಗಿದ್ದು, ಮನೆಯಲ್ಲಿ ನಡೆಯುವ ಆತ್ಮಗಳ ಕಾಟವನ್ನು ಕಣ್ಣಾರೆ ನೋಡಲು ಸುತ್ತಮುತ್ತಲಿನ ಊರಿನ ಜನ ಬರ್ತಿದ್ದಾರೆ.
ಕುಟುಂಬಕ್ಕೆ ಪ್ರೇತದ ಕಾಟವಿದ್ದು, ಇಡೀ ಊರೆ ಕಂಗಾಲು ಆಗಿದೆ. ರಾತ್ರಿ ಮನೆಯಲ್ಲಿನ ಪಾತ್ರೆ ಎಸೆದು ರಂಪಾಟ ಮಾಡುತ್ತಂತೆ ಪ್ರೇತ. ಪ್ರೇತಾತ್ಮದ ಕಾಟಕ್ಕೆ ಮಾಲಾಡಿಯ ಜನರು ಬೇಸತ್ತಿದ್ದಾರೆ. ನಮಗೆ ಮಾತ್ರ ತೊಂದರೆ ಆಗುತ್ತಿದೆ, ಯಾರೋ ನಮಗೆ ಮಾಟ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಲಾಡಿಯ ಉಮೇಶ್ ಶೆಟ್ಟಿ ಕುಟುಂಬ ಪ್ರೇತದ ಕಾಟ ಅನುಭವಿಸುತ್ತಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯೊಂದಿಗೆ ಉಮೇಶ್ ವಾಸವಿದ್ದಾರೆ. ಮೂರು ತಿಂಗಳಿನಿಂದ ಮನೆಯಲ್ಲಿ ಪ್ರೇತದ ತೊಂದರೆ ಇದೆ. ರಾತ್ರಿ ಮನೆಯಲ್ಲಿ ಮಲಗೋಕೆ ಆಗ್ತಿಲ್ಲ. ಬಟ್ಟೆಗಳನ್ನ ಸುಟ್ಟು, ಪಾತ್ರೆ ಬಿಸಾಡುತ್ತದೆ. ಮನೆಯ ಸುತ್ತಾ ಯಾರೋ ಓಡಿ ಹೋದ ಅನುಭವಾಗುತ್ತಿದೆ. ಮನೆಯಲ್ಲಿ ಮಲಗಿದರೆ ಕುತ್ತಿಗೆ ಹಿಸುಕಿದ ಅನುಭವ ಆಗುತ್ತಿದೆ. ನಾವು ಪ್ರೇತ ನೋಡಿದ್ದೇವೆ, ಉದ್ದನೆಯ ಕೂದಲು ಹೊಂದಿದೆ. ಯಾರೋ ನಮಗೆ ಮಾಟ ಮಾಡಿಸಿದ್ದಾರೆ ಎಂದು ಉಮೇಶ್ ಶೆಟ್ಟಿ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಇಡೀ ಊರೇ ಆತಂಕಕ್ಕೆ ಒಳಗಾಗಿದೆ. ಅಲ್ಲದೇ ಉಮೇಶ್ ಶೆಟ್ಟಿಯ ಅವರ ಮನೆಗೆ ಪ್ರತಿದಿನ ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಮಧ್ಯರಾತ್ರಿ ತನಕ ಉಮೇಶ್ ಶೆಟ್ಟಿ ಮನೆ ಬಳಿ ಜನರು ಸೇರುತ್ತಿದ್ದಾರೆ. ನಿಜಕ್ಕೂ ಮನೆಯಲ್ಲಿ ಆಗುತ್ತಿರೋದು ಏನು ಅಂತಾ ಸತ್ಯಶೋಧನೆಗೆ ಇಳಿದಿದ್ದಾರೆ. ನಿರಂತರವಾಗಿ ಜನರು ಬರೋದರಿಂದ ಅಕ್ಕಪಕ್ಕದ ಮನೆಯವರಿಗೂ ಕಿರಿಕಿರಿ ಆಗುತ್ತಿದೆ.
ಮನೆಯಲ್ಲಿ ಪ್ರೇತ ಕಾಣಿಸಿಕೊಂಡಿದೆ ಎನ್ನಲಾಗಿರುವ ದೃಶ್ಯವೊಂದು ಮೊಬೈಲ್ನಲ್ಲಿ ಸೆರೆಯಾಗಿದೆ. ಅದರಲ್ಲಿ ಮಹಿಳೆಯ ಭಯಾನಕ ರೀತಿಯ ಫೋಟೋ ಅದಾಗಿದೆ. ಈ ಫೋಟೋದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇಲ್ಲ. ಇನ್ನು ಬೆಂಕಿ ಹೊತ್ತಿಕೊಂಡಿರೋದಕ್ಕೆ ಸಂಬಂಧಿಸಿ, ವಿಡಿಯೋ ಒಂದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಆದರೆ ಅದೆಲ್ಲ ಹೇಗೆ ಆಗಿದೆ ಅನ್ನೋದ್ರ ಬಗ್ಗೆ ಖಚಿತತೆ ಇಲ್ಲದಿರೋದು ಹಲವರ ಅನುಮಾನಗಳಿಗೂ ಕಾರಣವಾಗಿದೆ.