ಮಂಗಳೂರು : ಗಟ್ಟಿಸ್ ಫಿಟ್ಲೈನ್ ಜಿಮ್ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರು ಇವರ ಮಾನ್ಯತೆಯೊಂದಿಗೆ ‘ಮಿಸ್ಟರ್ ಪುತ್ತಿಲ ಕ್ಲಾಸಿಕ್ -2025’ ಎರಡನೇ ಬಾರಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಅಂತರ್ ಜಿಲ್ಲಾ ಮಟ್ಟದ ‘ದೇಹದಾಡ್ಯ ಸ್ಪರ್ಧೆ’ಯು ಫೆ. 9 ರಂದು ಸಾಯಂಕಾಲ 5 ಗಂಟೆಗೆ ಕದ್ರಿ ಪಾರ್ಕ್‌ನಲ್ಲಿ ನಡೆಯಲಿರುವುದು ಎಂದು ಗಟ್ಟಿಸ್ ಫಿಟ್ಲೈನ್ ಜಿಮ್ ಮಾಲಕರಾದ ಅರುಣ್ ಕುಮಾರ್ ಗಟ್ಟಿ ತಿಳಿಸಿದರು.
ಗುರುವಾರದಂದು ತೊಕ್ಕೊಟ್ಟು ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಂದ 150 ಕ್ಕೂ ಅಧಿಕ ದೇಹದಾರ್ಢ ಪಟುಗಳು ಭಾಗವಹಿಸುವ ನಿರೀಕ್ಷೆ ಇದ್ದು, 55 ಕೆಜಿ, 60 ಕೆಜಿ , 65 ಕೆಜಿ, 70 ಕೆಜಿ, 75 ಕೆಜಿ ಹೀಗೆ 8 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದ 5 ಜನ ವಿಜೇತರಿಗೆ ಬಹುಮಾನವನ್ನು ನೀಡಲಾಗುವುದು.

ಟೈಟಲ್ ಹಾಗೂ ರನ್ನರ್ ಆಪ್‌ಗಳಿಗೆ 20 ಸಾವಿರ ಹಾಗೂ 25 ಸಾವಿರದಂತೆ ವಿಶೇಷ ಬಹುಮಾನವನ್ನು ನಗದು ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ :
ಉಡುಪಿ, ದಕ್ಷಿಣ ಕನ್ನಡದ ಸಂಸದರು, ಶಾಸಕರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಸಾಧಕರಾದ ರವಿ ಕಟಪಾಡಿ, ಹರೇಕಳ ಹಾಜಬ್ಬ, ರಜನಿ ಶೆಟ್ಟಿ, ಈಶ್ವರ್ ಮಲ್ಪೆ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ ಕೇರಳ ಮೂಲದ ಗ್ಯಾನ ಗಟ್ಟಿ ಇವರನ್ನು ಸನ್ಮಾನಿಸಲಾಗುವುದು ಎಂದರು.

ಫ್ರೆಂಡ್ಸ್ ಕೊಲ್ಯ ಸ್ಥಾಪಕಾಧ್ಯಕ್ಷರಾದ ಅಶ್ವಿನ್ ಕೊಲ್ಯ, ವೃಕ್ಷ ಕಾರ್ಪೊರೇಷನ್ ಮಾಲಕರಾದ ಭರತ್ ಗಟ್ಟಿ ಮಧೂರು, ಪಣಂಬೂರು ಶ್ರೀ ಸಾಯಿ ಲಾಜಿಸ್ಟಿಕ್ ಸಹ ಪಾಲುದಾರರಾದ ಪ್ರಶಾಂತ್ ಗಟ್ಟಿ ಅಡ್ಕ, ದಕ್ಷಿಣ ಕನ್ನಡ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ಸ್ ಮಂಗಳೂರಿನ ಕಾರ್ಯದರ್ಶಿ ದಿಲೀಪ್ ಕುಮಾರ್ ಕೈಕಂಬ, ಸಂಘಟಕರಾದ ದೀಪಕ್ ದಾಸ್ ಕೊಲ್ಯ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.