ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಯ ಮೊದಲ ಭಾಗವಾಗಿ ದೇವಳದ ಪುಷ್ಕರಣಿಯ ಸುತ್ತ ಮುತ್ತಲಿನ ಪ್ರದೇಶದ ಅಭಿವೃದ್ಧಿಗೋಸ್ಕರ ಫೆ.11 ರಂದು ಬೆಳಗ್ಗೆ 9 ರಿಂದ ಭಕ್ತರಿಂದ ಕರಸೇವೆ ನಡೆಯಲಿದೆ.
ಈಶ ಸೇವೆಗಾಗಿ ನಡೆಯುವ ಈ ಕರಸೇವೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿವೃದ್ಧಿಯ ಕಾಯಕದಲ್ಲಿ ಜೊತೆಯಾಗಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ್ ಭಟ್ ಪಂಜಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.