ಬೆಂಗಳೂರು: ಅಪಾರ್ಟ್ಮೆಂಟ್ನ 20ನೇ ಮಹಡಿಯಿಂದ ಜಿಗಿದು 15 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅವಂತಿಕಾ ಚೌರಾಸಿಯಾ(15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಘಟನಾ ಸ್ಥಳಕ್ಕೆ ಕಾಡುಗೋಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮಧ್ಯಪ್ರದೇಶ ಮೂಲದ ಕುಟುಂಬ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಬಾಲಕಿಯ ತಂದೆ ಖಾಸಗಿ ಕಂಪನಿಯ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ನಗರದ ಖಾಸಗಿ ಶಾಲೆಯಲ್ಲಿ ಬಾಲಕಿ ಅವಂತಿಕಾ ಚೌರಾಸಿಯಾ ಎಸ್ಎಸ್ಎಲ್ಸಿ ಓದುತ್ತಿದ್ದಳು. ಕಳೆದ ಪರಿಕ್ಷೆಯಲ್ಲಿ ಅವಂತಿಕಾ ಸರಳವಾದ ಅಂಕ ಪಡೆದಿದ್ದಳು. ಈ ನಡುವೆ 15ನೇ ತಾರೀಖಿನಿಂದ ಪರೀಕ್ಷೆ ಸಹ ಶುರುವಾಗಲಿತ್ತು. ಈ ನಡುವೆ ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದಳು.
ಇದನ್ನು ಕಂಡು ತಾಯಿ ಬುದ್ಧಿಮಾತು ಹೇಳಿದ್ದಾರೆ. ಪರೀಕ್ಷೆ ಬರುತ್ತಿದೆ ಓದುವುದು ಬಿಟ್ಟು ಮೊಬೈಲ್ನಲ್ಲಿ ಇರ್ತಿಯಾ ಎಂದು ತಾಯಿ ಬೈದಿದ್ದಾರೆ. ಈ ಮಾತು ಕೇಳಿ ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಖಾಸಗಿ ಆಸ್ಪತ್ರೆಗೆ ಮೃತ ಬಾಲಕಿಯ ಮೃತದೇಹ ಶಿಫ್ಟ್ ಮಾಡಲಾಗಿದೆ.