ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ, ವಿಟ್ಲ ಪಡ್ನೂರು ಇದರ
ಯುವಕ ಮಂಡಲದ ೩ನೇ ವರ್ಷದ ವಾರ್ಷಿಕ ಕಾರ್ಯಕ್ರಮ ಹಾಗೂ
ಕಬಡ್ಡಿ ಪಂಧ್ಯಾಟ ಪೆಬ್ರವರಿ 08 ನೇ ಶನಿವಾರ ಪೂರ್ಲಪ್ಪಾಡಿ ಶ್ರೀವರ ವೇಧಿಕೆ
ಮುಂಬಾಗದಲ್ಲಿ ಜರುಗಿತು .

ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಶ್ರೀ ನವೀನ
ತಂತ್ರಿ ಕುಂಟುಕುಡೇಲು ರವರು ಕಾರ್ಯಕ್ರಮದ
ಉಧ್ಘಾಟನೆಯೊಂದಿಗೆ , ಯುವಕ ಮಂಡಲದ ವತಿಯಿಂದ, ರೋಟರಿ ಕ್ಲಭ್
ವಿಟ್ಲ ಇದರ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಸಿ ಎಚ್ ಹಾಗೂ ಇಂಡಿಯನ್ ರೆಡ್
ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್
ರಕ್ತದಾನ ಶಿಬಿರ , ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇವರ
ಸಹಕಾರದೊಂದಿಗೆ ಉಚಿತ ಮಧುಮೇಹ , ರಕ್ತದೊತ್ತಡ,
ಹಿಮೋಗ್ಲೋಬಿನ್ ಪರೀಕ್ಷೆ ಮತ್ತು ರಕ್ತದ ಗುಂಪು ಪರೀಕ್ಷೆ
ಕಾರ್ಯಕ್ರಮಗಳು ನಡೆಯಿತು.

ಮಧ್ಯಾಹ್ನ ೨ರಿಂದ ಶಾಲಾ ವಿಧ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ
ಆಟೋಟ ಸ್ಪರ್ಧೆಗಳು ಹಾಗೂ ಎಸ್ ಎಸ್ ಎಲ್ ಸಿ ಒಳಗಿನ ಪ್ರೌಢಶಾಲಾ
ಮಕ್ಕಳಿಗೆ ತಂಡ ರಸಪ್ರಶ್ನೆ ಕಾರ್ಯಕ್ರಮ ಅನಿಲಕಟ್ಟೆ ಶಾಲಾ
ಮುಖ್ಯೋಪಾದ್ಯಾಯಿನಿ ಶ್ರೀಮತಿ ಸೌಮ್ಯಲತಾ ಹಾಗೂ ಪುಣಚ ಶ್ರೀ
ಜಗದೀಶ ಪನಡ್ಕ ರವರ ಸಹಕಾರದೊಂದಿಗೆ ನಡೆದವು.
ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾÊಕ್ ಉಳಿಪ್ಪಾಡಿ
ಆಗಮಿಸಿ ಶುಭಹಾರೈಸಿದರು ಹಾಗೂ ಸಂಜೆ ೮.೩೦ ಗಂಟೆಗೆ ಸರಿಯಾಗಿ
ಸಭಾಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ಇಕೋಬ್ಲಿಸ್
ಬಲಿಪಗುಳಿ ಇದರ ಮಾಲಕರಾದ ಶ್ರೀ ರಾಜಾರಾಮ್ ಭಟ್ ಬಲಿಪಗುಳಿ
ವಹಿಸಿದ್ದರು.

ಅತಿಥಿಗಳಾಗಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್
ಅಧ್ಯಕ್ಷರಾದ ಶ್ರೀ ಜಯಂತ್ ಪೂರ್ಲಪ್ಪಾಡಿ, ವಿಟ್ಲ ಪಡ್ನೂರು ಪ್ರಾಥಮಿಕ
ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ ಉಪಾಧ್ಯಕ್ಷರಾದ ಶ್ರೀ ರವೀಶ್
ಶೆಟ್ಟಿ ಕರ್ಕಳ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ
ಅಧ್ಯಕ್ಷರಾದ ಶ್ರೀ ಮಾದವ ಮಾವೆ, ಶ್ರೀ ಮಲರಾಯಿ ದೈವಸ್ಥಾನ
ಆಡಳಿತ ಸೇವಾ ಟ್ರಸ್ಟ್ (ರಿ) ಪೂರ್ಲಪ್ಪಾಡಿ ಇದರ ಅಧ್ಯಕ್ಷರಾದ ಶ್ರೀ ರಾಮಣ್ಣ
ಗೌಡ ದೇವರಮನೆ , ವಿಟ್ಲ ಪಡ್ನೂರು ಪ್ರಾಥಮಿಕ ಕೃಷಿ ಪತ್ತಿನ
ಸಹಕಾರಿ ಸಂಘ ನಿ ಇದರ ನಿರ್ಧೇಶಕರಾದ ಶ್ರೀಮತಿ ಧರ್ಮಾವತಿ
ದೇವರಮನೆ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ
ಶ್ರೀ ನಾಗೇಶ್ ಶೆಟ್ಟಿ ಕೊಡಂಗಾಯಿ, ಬಿಜೆಪಿ ಮಾಣಿ ಮಹಾಶಕ್ತಿ ಕೇಂದ್ರದ
ಅಧ್ಯಕ್ಷರಾದ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು, ವಿಠಲ ಪದವಿಪೂರ್ವ
ಕಾಲೇಜು ವಿಟ್ಲ ದೈಹಿಕ ನಿರ್ದೇಶಕರಾದ ಶ್ರೀ ಶ್ರೀನಿವಾಸ ಗೌಡ, ಅಕ್ಷಯ
ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ಇದರ ಗೌರವ ಸಲಹೆಗಾರರಾದ ಶ್ರೀ
ಹಕೀಂ ಪರ್ತಿಪ್ಪಾಡಿ, ಯುವಕೇಸರಿ ಅಭೀರಿ, ಅತಿಕಾರಬೈಲು (ರಿ.) ಚಂದಳಿಕೆ
ಇದರ ಅಧ್ಯಕ್ಷರಾದ ಶ್ರೀ ವನೀತ್ ಸಾಲಿಯಾನ್ ಅಭೀರಿ, ಶಿಲ್ಪಶ್ರೀ ಯುವಕ
ಮಂಡಲ (ರಿ.) ಕೊಡಂಗಾಯಿ ಇದರ ಅಧ್ಯಕ್ಷರಾದ ಶ್ರೀ ರೋಹಿತ್ ರೈಚೆಂಬರಡ್ಕ, ಫ್ರೆಂಡ್ಸ್ (ರಿ.) ಕಾಪುಮಜಲು ಇದರ ಅಧ್ಯಕ್ಷರಾದ ಶ್ರೀ
ವಿನಯ ಜೋಗಿ ಕಾಪುಮಜಲು, ಶ್ರೀ ಹಮೀದ್ ಟಿ. ಕೊಡಂಗಾಯಿ, ಶ್ರೀ
ಉಮೇಶ್ ಶೆಟ್ಟಿ ತಾರಿಯಡ್ಕ, ಶ್ರೀವರ ಯುವಕ ಮಂಡಲದ
ಗೌರವಾಧ್ಯಕ್ಷರಾದ ಶ್ರೀ ಈಶ್ವರ ಭಟ್ ಬದನಾಜೆ, ಗ್ರಾಮ
ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಲಕ್ಷಿö್ಮ ಕೆ, ಶ್ರೀವರ
ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡ ಕೆ
ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ sಸಮಾಜದಲ್ಲಿ
ಸಾಧನೆಗೈದ ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ
ಶ್ರೀ ಗೋಪಾಲ ಜೋಗಿ , ಶ್ರೀ ಶೇಖರ ಪರವ , ವೃತ್ತಿ ನಿವೃತ್ತಿಗೊಂಡ
ಶ್ರೀಮತಿ ಕಮಲ ಡಿ , ಶ್ರೀ ಬಾಲಕೃಷ್ಣ ಮಡಿವಾಳ ರವರಿಗೆ ಸನ್ಮಾನ
ಹಾಗೂ ಕ್ರೀಢಾ ಕ್ಷೇತ್ರದಲ್ಲಿ ಸಾದನೆಗೈದಿರುವ ಐವರನ್ನು
ಗುರುತಿಸಲಾಯಿತು ಮತ್ತು ಯುವಕ ಮಂಡಲದ ವತಿಯಿಂದ
ನಡೆದ ವಿವಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಾಳವಿ ಯತೀಶ್, ಪ್ರಾರ್ಥಿಸಿದರು.
ಶ್ರೀ ಜಯಂತ ಪಿ ಸ್ವಾಗತಿಸಿ, ಯತೀಶ್ ಪಿ ಸನ್ಮಾನ ಪತ್ರ ವಾಚಿಸಿದರು, ಹರೀಶ್ ವಿಟ್ಲ
ವಂದಿಸುವುದರೊAದಿಗೆ ಕಾರ್ಯಕ್ರಮ ನಿರೂಪಿಸಿದರು. ಯುವಕ
ಮಂಡಲದ ಪಧಾಧಿಕಾರಿಗಳು ಈ ಸಂದರ್ಭದಲ್ಲಿ ಸಹಕರಿಸಿದರು.
ನಂತರ ಶಾಲಾ ವಿಧ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃತಿಕ
ಕಾರ್ಯಕ್ರಮ ಜರುಗಿತು. ಮತ್ತು ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ
ಸಾAಸ್ಕೃತಿಕ ಸಂಭ್ರಮ ಕಾರ್ಯಕ್ರಮ ಜರುಗಿತು. ನಂತರ ೫೮ ಕೆ.ಜಿ
ವಿಭಾಗದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.