ಬೆಂಗಳೂರು : ಇಂದು ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವ ಒಂದು ಪೋಸ್ಟರ್, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗೆಯೇ ಅಪ್ ಲೋಡ್ ಮಾಡಿರುವ ಪೋಸ್ಟರ್ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
₹389 ರೂಪಾಯಿಗೆ ಬಾಯ್‌ಫ್ರೆಂಡ್ ಬಾಡಿಗೆಗೆ ಎಂಬ ವಿವಾದಾತ್ಮಕ ಪೋಸ್ಟರ್ QR ಕೋಡ್ ನೊಂದಿಗೆ ಕಾಣಿಸಿಕೊಂಡಿದೆ. ಈ ಪೋಸ್ಟರ್ ಆಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪೋಸ್ಟರ್ ನಲ್ಲಿ ಪ್ರೇಮಿಗಳ ದಿನಕ್ಕೆ ಗೆಳೆಯ ಇಲ್ಲವೇ ? ಹಾಗಾದರೆ ಒಂದು ದಿನದ ಬಾಡಿಗೆ ಗೆಳೆಯನಿಗೆ ಹಣ ಕೊಡಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಬೆಂಗಳೂರು ನಗರದ ಪ್ರತಿಷ್ಠಿತ ಪ್ರದೇಶವಾದ ಜಯನಗರ ಮತ್ತು ಬನಶಂಕರಿ ಪ್ರದೇಶದ ಗೋಡೆಗಳಲ್ಲಿ ಈ ಪೋಸ್ಟರ್ ಕಾಣಿಸಿಕೊಂಡಿದೆ. ಇದನ್ನು ಯಾರು ಇಲ್ಲಿ ಅಂಟಿಸಿದ್ದಾರೆ ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಆದರೆ, ದುಷ್ಕರ್ಮಿಗಳು ಅಂಟಿಸಿರುವ ಈ ಪೋಸ್ಟರ್ ಸಾಕಷ್ಟು ವೈರಲ್ ಆಗಿದೆ.
ಪೋಸ್ಟರ್ ನಲ್ಲಿ ಒಬ್ಬ ಹುಡುಗನಿಗೆ ಕೇವಲ 389 ರೂಪಾಯಿ, ನನ್ನನ್ನು ಸ್ಕ್ಯಾನ್ ಮಾಡಿ ಎಂದು ಬರೆಯಲಾಗಿದೆ. ಅಂದರೆ ಒಬ್ಬ ಗೆಳೆಯನನ್ನು ಕೇವಲ 389 ರೂಪಾಯಿಗೆ ಬಾಡಿಗೆ ಪಡೆಯಬಹುದು ಎಂದು ಬರೆದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟರ್ ಗಳು ಜಯನಗರದ 8 ನೇ ಬ್ಲಾಕ್ ಮತ್ತು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಗೋಡೆಗಳಲ್ಲಿ ಕಂಡುಬಂದಿದೆ.
ಇಂತಹ ಪೋಸ್ಟರ್ ಗಳಿಂದ ಬೆಂಗಳೂರು ನದರದ ಐತಿಹಾಸಿಕ ಸಂಸ್ಕೃತಿಯನ್ನು ಹಾಳು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು, ಸ್ಥಳೀಯರು ಆಕ್ರೋಶ ವ್ಯಕ್ತವಪಡಿಸಿದ್ದು, ಎಲ್ಲಾರೂ ಅಸಮ್ಮತಿ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಸಾಕಷ್ಟು ವೈರಲ್ ಆಗಿದೆ.