ಪುತ್ತೂರು :ದಿನಾಂಕ 15/02/2025 ರಂದು, ಮಕ್ಕಳಿಂದ ಧಾರ್ಮಿಕ ಶಿಕ್ಷಣದಲ್ಲಿ ತಾವು ಕಲಿತ ಶ್ಲೋಕಗಳು, ಆಚಾರ -ವಿಚಾರ ಕಗ್ಗವಾಚನ, ಭಗವದ್ಗೀತೆ, ಕುಣಿತ ಭಜನೆ ಹಾಗೂ ನೃತ್ಯ ರೂಪಕ, ಪುಟಾಣಿಗಳಿಂದ ವಿವಿಧ ವೇಷಧಾರಿಗಳ ಪಾತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.
ಬೋಧಕರಿಗೆ ಮಕ್ಕಳಿಗೆ ಸಾಮೂಹಿಕ ಹುಟ್ಟುಹಬ್ಬದ ಪ್ರಯುಕ್ತ ಆರತಿ ನೆರವೇರಿಸಲಾಯಿತು. ಶ್ರೀಯುತ ಕೇಶವ ಪ್ರಸಾದ್ ಮುಳಿಯ ಇವರು ಶಿಕ್ಷಣ ಕೇಂದ್ರದ ಲೋಗೋ ಬಿಡುಗಡೆ ಮಾಡಿ ಶುಭ ಹಾರೈಸಿದರು. ಮಹಾಲಿಂಗೇಶ್ವರ ದೇವಸ್ಥಾನದ ಗೋನಿಧಿ ಸಂಗ್ರಹಕ್ಕಾಗಿ ನೀಡಿದ ಕಾಣಿಕೆ ಡಬ್ಬಿಯನ್ನು ಮಕ್ಕಳು ಸಮರ್ಪಿಸಿದರು.ಹಾಗೆಯೇ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕೇಂದ್ರದ ನಿರ್ವಾಹಕರಾದ ವಿ.ಪ್ರಭಾವತಿ ಬೋಧಕರಾದ ವತ್ಸಲಾರಾಜ್ಙಿ, ವಿದ್ಯಾ ಜೆ ರಾವ್, ಪ್ರಶಾಂತ್ ದೊಡ್ಡಡ್ಕ, ವಿದ್ಯಾ ಸರಸ್ವತಿ, ಇವರುಗಳನ್ನು ಕೃಷ್ಣವೇಣಿ ಮತ್ತು ಕೇಶವ ಪ್ರಸಾದ್ ಮುಳಿಯ
yದಂಪತಿಗಳು ಸನ್ಮಾನಿಸಿದರು.

ನಡೆದ ಈ ಕಾರ್ಯಕ್ರಮವು ಅಟಲ್ ಉದ್ಯಾನದಿಂದ ಮೆರವಣಿಗೆ ಹೊರಟು ದ್ರಾವಿಡ ಬ್ರಾಹ್ಮಣ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಭಾಧ್ಯಕ್ಷತೆಯಲ್ಲಿ ಶ್ರೀಯುತ ಪಿ.ಜಿ.ಜಗನ್ನಿವಾಸ್ ರಾವ್, ಉದ್ಘಾಟಕರಾಗಿ ಕ್ಯಾಪ್ಟನ್ ಗಣೇಶ್ ಕಾರಣಿಕ್,ಮುಖ್ಯ ಅತಿಥಿಯಾಗಿ ದೇವಾಲಯ ಸಂವರ್ಧನಾ ಸಮಿತಿ ವಿಭಾಗ ಪ್ರಮುಕ್ ಹಾಗೂ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಪ್ರಾರಂಭಸಿದ ಶ್ರೀಯುತ ಕೇಶವ್ ಪ್ರಸಾದ್ ಮುಳಿಯ, ಗೌರವ ಉಪಸ್ಥಿತಿಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರ್, ಅಪ್ಪಯ್ಯ ಮಣಿಯಾಣಿ, ಹಾಗೂ ಶಿಕ್ಷಣ ಕೇಂದ್ರದ ಬೋಧಕರಾದ ಶ್ರೀಮತಿ ವತ್ಸಲಾರಾಜ್ಞಿ, ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ, ವೀಣಾ ಬಿ.ಕೆ, ಪ್ರೇಮಲತಾ ರಾವ್, ಸಂತೋಷ್ ಕುಮಾರ್, ಗೌರಿ ಬನ್ನೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕು. ಆಕಾಂಕ್ಷ ಸ್ವಾಗತಿಸಿದರು. ಮಾ.ಸಾತ್ವಿಕ್ ಮಂದಿಸಿದರು. ಸುಮನ ಮತ್ತು ಬಳಗದವರು ನಿರೂಪಿಸಿದರು.


