ತುಮಕೂರು : ಪತ್ನಿ ಸ್ನೇಹಿತನ ಜೊತೆ ಪರಾರಿಯಾಗಿರುವುದರಿಂದ ಮನನೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ತುಮಕೂರಿನ ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್‌ನಲ್ಲಿ ನಡೆದಿದೆ.
ನಾಗೇಶ್ (35) ಮೃತ ವ್ಯಕ್ತಿ. ನಾಗೇಶ್ ಕಳೆದ 12 ವರ್ಷಗಳಿಂದ ರಂಜಿತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೂ ಸಹ ರಂಜಿತಾ ಈಗ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಮನೆಬಿಟ್ಟು ಪರಾರಿಯಾಗಿದ್ದಾಳೆ.
ಇದರಿಂದ ಮನನೊಂದು ನಾಗೇಶ್, ನನ್ನ ಸಾವಿಗೆ ಪತ್ನಿ ರಂಜಿತಾ, ಸ್ನೇಹಿತ ಭರತ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.
ನಾಗೇಶ್ ಸ್ನೇಹಿತ ಭರತನಿಗೆ ರಂಜಿತಾ ಪರಿಚವಾಗಿದ್ದು, ಬಳಿಕ ಅದು ಇಬ್ಬರ ಮಧ್ಯ ಪ್ರೇಮಾಂಕುರವಾಗಿದೆ. ಬಳಿಕ ರಂಜಿತಾ ಭರತನ ಜೊತೆ ಅನೈತಕ ಸಂಬಂಧ ಇಟ್ಟುಕೊಂಡಿದ್ದಳು. ಆದ್ರೆ, ಇದೀಗ ಇಬ್ಬರು ಮಕ್ಕಳನ್ನು ಬಿಟ್ಟು ಭರತ್ ಜೊತೆ ಪರಾರಿಯಾಗಿದ್ದಾಳೆ.
ಈ ಘಟನೆದಿಂದ ನಾಗೇಶ್ ಮನನೊಂದಿದ್ದಾರೆ. ಅಲ್ಲದೇ ಹೆಂಡ್ತಿ ಹೀಗೆ ಬೇರೊಬ್ಬರನ ಜೊತೆ ಓಡಿಹೋಗಿದ್ದಾಳೆಂಬ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಆತ್ಮಹತ್ಯೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. “ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ. ನನಗೆ ನ್ಯಾಯ ಕೊಡಿಸಬೇಕು ಎಂದು ವಿಡಿಯೋನಲ್ಲಿ ಹೇಳಿಕೊಂಡಿದ್ದಾನೆ. ಇನ್ನು ಈ ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಬರುವ ವೇಳೆಗೆ ನಾಗೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಬೇರೊಬ್ಬನ ಜತೆ ಓಡಿಹೋಗಿದ್ದರೆ, ಇತ್ತ ತಂದೆ ಸಾವಿನ ಮನೆ ಸೇರಿದ್ದರಿಂದ ಎರಡು ಮಕ್ಕಳು ಅನಾಥವಾಗಿವೆ.