ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಹಿರಿಯ ಪತ್ರಕರ್ತ, ಮೈತ್ರೇಯಿ ಗುರುಕುಲದ ಸಹ ವ್ಯವಸ್ಥಾಪಕ, ಜನಾರ್ಧನ ವಿಟ್ಲ ಇಂದು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ.
ಬಾಲ್ಯದಿಂದಲೇ ಸಂಘ ಪರಿವಾರದ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಜನಾರ್ಧನ ವಿಟ್ಲ ಅವರು ಹಿರಿಯ ಸ್ವಯಂಸೇವಕ ಶಿವಾಜಿ ನಾರಾಯಣ್ ಶೆಟ್ಟಿಗಾರ್ ಅವರ ಕಿರಿಯ ಸಹೋದರರಾಗಿದ್ದರು.

ಅಯೋಧ್ಯಾ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಹಲವು ವರ್ಷಗಳ ಕಾಲ ಹೊಸದಿಗಂತ ದಿನಪತ್ರಿಕೆಯ ವಿಟ್ಲ ಭಾಗದ ಪ್ರಧಾನ ವರದಿಗಾರರಾಗಿದ್ದರು. ವಿಟ್ಲ ಮೂರುಕಜೆಯಲ್ಲಿರುವ ಮೈತ್ರೇಯಿ ಗುರುಕುಲದ ಸಹ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಾ ರಾಜ್ಯಾದ್ಯಂತ ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದರು.
ವಿಟ್ಲ ಬಾಲಗೋಕುಲ ಸಮಿತಿಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ವಿಟ್ಲ ಮಹಾಶಕ್ತಿ ಭಾರತೀಯ ಜನತಾ ಪಾರ್ಟಿ ವಿಟ್ಲ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಸಂತಾಪ ಸೂಚಿಸಿದೆ.