ಪೆರ್ನೆ :ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರು ಮತ್ತು ಅತ್ತೆಜಾಲು ಸ್ಥಳದಲ್ಲಿ ಅತೀ ಪುರಾತನವಾಗಿ ಆರಾಧಿಸಿಕೊಂಡು ಬಂದಿರತಕ್ಕಂತಹ ಭಂಡಾರದ ಮನೆ ಮತ್ತು ದೈವಗಳ ಗುಡಿಮಾಡಗಳು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಜೀರ್ಣೋದ್ಧಾರಗೊಂಡು, ಇದೇ ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಕುಂಭಮಾಸ ೯ ಸಲುವ ದಿನಾಂಕ 21-02-2025ನೇ ಶುಕ್ರವಾರ
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ, ಉಳ್ಳಾಕ್ಲು, ಕೊರತಿದೈವ ಮತ್ತು ಗುಳಿಗ ದೈವ ಹಾಗೂ ನಾಗ ಸನ್ನಿಧಿಯಲ್ಲಿ
ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿರುವುದು.

ಆದುದರಿಂದ ಈ ಪುಣ್ಯ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಬಂದು ಭಾಗವಹಿಸಿ, ತನು-ಮನ-ಧನ ಹಾಗೂ ಸರ್ವ ವಿಧದ ಸಹಕಾರಗಳನ್ನಿತ್ತು, ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಗೌರವಾಧ್ಯಕ್ಷರು ಈಶ್ವರ ಪ್ರಸನ್ನ ಪೆರ್ನೆಕೋಡಿ , ಅಧ್ಯಕ್ಷರಾದ ಕಿರಣ್ ಶೆಟ್ಟಿ ಮುಂಡವಿನಕೋಡಿ ಪೆರ್ನೆ
ವಿನಮ್ರ ವಾಗಿ ವಿನಂತಿಸಿಕೊಂಡಿದ್ದಾರೆ.