ಪಾಣಾಜೆ: ಕೇರಳ ಭಾಗದ ಕೊಳತ್ತೂರಿನ ಪ್ರದೇಶದಲ್ಲಿ ಹಿಡಿದ ಚಿರತೆಯನ್ನು ಪಾಣಾಜೆ ಗಡಿಯಲ್ಲಿ ಬಿಟ್ಟ ವದಂತಿ ಸಾಕಷ್ಟು ಸುದ್ದಿ ಮಾಡುತ್ತಿದ್ದು ಪಾಣಾಜೆ ಜನತೆಯಲ್ಲಿ ಆತಂಕ ಮೂಡಿದೆ.
ಕೇರಳದ ಅರಣ್ಯ ಇಲಾಖೆಯ ಅಧಿಕಾರಿಗಳು ಕೇರಳ ಭಾಗದ ಕೊಳತ್ತೂರಿನಲ್ಲಿ ಖಾಸಗಿ ಜಾಗದಲ್ಲಿದ್ದ ಚಿರತೆಯನ್ನು ಹಿಡಿದಿದ್ದು ಅದನ್ನು ಪಾಣಾಜೆ ಗಡಿ ಭಾಗದಲ್ಲಿ ಬಿಟ್ಟಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಮಧ್ಯೆ ಯಾವ ಜಾಗದಲ್ಲಿ ಬಿಟ್ಟಿದ್ದಾರೆ ಎಂದು ಬಹಿರಂಗಪಡೆಸಿಬೇಕಾಗಿ ಸ್ಥಳೀಯರು ಬೆಳ್ಳೂರು ಗ್ರಾಮ ಪಂಚಾಯತ್ ಬಳಿ ಆಗ್ರಹಿಸಿದರು.

























