ಉಡುಪಿ: ಸಾಮಾನ್ಯವಾಗಿ ಮನುಷ್ಯರ ಅನುಮಾನಸ್ಪದ ಸಾವಿನ ಪ್ರಕರಣದ ತನಿಖೆಗೆ ಮೃತದೇಹ ಮೇಲತ್ತಿ ಮರಣೋತ್ತರ ಪರೀಕ್ಷೆ ನಡೆಸುವುದು ಸಾಮಾನ್ಯ. ಆದರೆ ಉಡುಪಿ ಜಿಲ್ಲೆಯ ಕಾಪು ಪೊಲೀಸರು ನಾಯಿಯೊಂದರ ಸಾವಿನ ಪ್ರಕರಣದ ತನಿಖೆಗಾಗಿ ಮಣ್ಣಿನಲ್ಲಿ ಹೂತಿದ್ದ ನಾಯಿಯ ಕಳೆಬರವನ್ನು ಮೇಲತ್ತಿದ್ದಾರೆ.
ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿರುವ ಪೊಲೀಸರು ಕಳೆಬರ ಮೇಲೆತ್ತಿ ಬೈಲೂರಿನ ಪಶು ಚಿಕಿತ್ಸಾ ಕೇಂದ್ರಕ್ಕೆ ತೆಗದುಕೊಂಡು ಹೋಗಿದ್ದಾರೆ.
ಫೆ.21 ರಂದು ಮನೆಯ ಸಾಕು ನಾಯಿ ಸಾವನಪ್ಪಿದ್ದು, ಮನೆಯವರು ಮನೆಯ ಆವರಣದಲ್ಲೇ ನಾಯಿಯನ್ನು ಮಣ್ಣು ಮಾಡಿದ್ದರು. ಆದ್ರೆ ಯಾರೋ ನಾಯಿಗೆ ವಿಷ ವಿಟ್ಟು ಕೊಂದಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಕಾರ್ಯಕರ್ತೆ ಪ್ರಾಣಿಪ್ರಿಯೆ ಬಿಂದು ಎಂಬವರು ಮನೆಯವರ ಜೊತೆ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆ ಮೂಲಕ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಮುಂದಾಗಿದ್ದಾರೆ. ನಾಯಿಯನ್ನು ಮಣ್ಣು ಮಾಡಿದ್ದ ಕಾಪುವಿನ ಮನಿಪುರದ ಬಡಗು ಮನೆಗೆ ಬಂದು ನಾಯಿಯ ಕಳೆಬರವನ್ಹು ಮರಣೋತ್ತರ ಪರೀಕ್ಷೆಗೆ ತೆಗದುಕೊಂಡು ಹೋಗಿದ್ದಾರೆ.
ಪ್ರಾಣಿ ದಯಾ ಸಂಘದ ಮಂಜುಳಾ ಅವ ಸಮಕ್ಷಮದಲ್ಲಿ ಕಾನೂ ಪ್ರಕ್ರಿಯೆ ನಡೆಸಲಾಗಿದ್ದು, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರ ಸಹಾಕರದಲ್ಲಿ ಈ ಕಾರ್ಯ ಮಾಡಲಾಗಿದೆ.