ನಿಗೂಡವಾಗಿ ನಾಪತ್ತೆಯಾದ ಪರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.
ತೀವ್ರ ದುಃಖದಲ್ಲಿರುವ ತಂದೆ ತಾಯಿ ಜೊತೆ ಮಾತನಾಡಿದ ಅರುಣ್ ಪುತ್ತಿಲ ನಂತರ ಎಸ್ಪಿ ಜೊತೆ ಹಾಗೂ ತನಿಖಾ ತಂಡದ ಜೊತೆಗೂ ಮಾತನಾಡಿ ಶೀಘ್ರ ಪತ್ತೆ ಹಚ್ಚುವಂತೆ ಒತ್ತಾಯಿಸಿದರು.
ತನಿಖೆ ಪ್ರಗತಿಯಲ್ಲಿದ್ದು ಆದಷ್ಟು ಶೀಘ್ರ ಪತ್ತೆ ಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಗಾಂಜ ಅಡ್ಡೆಯಾಗಿರುವ ಪರಂಗಿಪೇಟೆ ಪ್ರದೇಶದಲ್ಲಿ ಗಾಂಜಾ ನಿರ್ಮೂಲನೆಗೆ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅರುಣ್ ಪುತ್ತಿಲ ಹೇಳಿದರು.