ಪುತ್ತೂರು: ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯೋರ್ವಳು ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ತೆಲಸಂಗ ಗ್ರಾಮದ ಕೃತಿಕಾ ಸಿದ್ದಣ್ಣ ನಿಡೋಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮೃತರ ತಂದೆ ನೀಡಿದ ದೂರಿನ ಮೇರೆಗೆ ಪುತ್ತೂರಿನ ನವೀನ್ ಮತ್ತು ವಸತಿ ಗ್ರಹದ ಮೇಲ್ವಿಚಾರಕಿ ತಾರ ಕುಮಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತ ಯುವತಿಗೆ ಪುತ್ತೂರಿನ ನವೀನ್ ಎಂಬಾತ ಪದೇ ಪದೇ ಕರೆ ಮಾಡಿ ತೊಂದರೆ ನೀಡಿ ಫೋಟೋ ವಿಡಿಯೋಗಳನ್ನು ತಂದೆಗೆ ಕಳಿಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಕಿಸಲಾಗಿದೆ.
ಇದರಿಂದ ಮಾನಸಿಕವಾಗಿನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ವಿಚಾರಗಳನ್ನು ವಸತಿ ಗೃಹದ ಮೇಲ್ವಿಚಾರಕಿ ತಾರಾ ಗಮನಿಸದೆ ಪಾಲಕರ ಗಮನಕ್ಕೆ ತರದೇ ಕರ್ತವ್ಯ ಲೋಪ ವೆಸಗಿದ್ದಾರೆ ಮತ್ತು ಯುವತಿಯ ಆತ್ಮಹತ್ಯೆಗೆ ಕಾರಣವಾದ ನವೀನ್ ವಿರುದ್ಧ ದೂರು ನೀಡಿದ್ದು.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ. 28/2025 ಕಲಂ 108 BNS ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
ಸದ್ಯ ಪುತ್ತೂರಿನ ನವೀನ್ ಎಂಬಾತ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.