ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಚುನಾವಣೆ ಇಂದು ನಡೆದಿದ್ದು ಸಹಕಾರ ಭಾರತಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಒಟ್ಟು 15 ನಿರ್ದೇಶಕ ಸ್ಥಾನಗಳಲ್ಲಿ 6 ಜನ ಈಗಾಗಲೇ ಅವಿರೋಧವಾಗಿ ಆಯ್ಕೆಯಾದರೆ ಉಳಿದ 9 ಸ್ಥಾನಗಳಿಗೆ 13 ಜನ ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ನಡೆದಿತ್ತು.
ಇಂದು ನಡೆದ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನದಿಂದ ಕೇಶವ ಎ, ಗೋವರ್ಧನ ಕುಮಾರ್, ತಿರುಮಲೇಶ್ವರ ಭಟ್, ಭಾಸ್ಕರ ಶೆಟ್ಟಿ, ಮನೋರಂಜನ್ ಕರೈ, ಮೋಹನ್ ಕೆಎಸ್, ರಾಮದಾಸ್ ಶೆಣೈ, ವಿಶ್ವನಾಥ ಎಂ, ಸತೀಶ್ ಪಂಜಿಗದ್ದೆ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾದರು.

ಹಾಲಿ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ದಯಾನಂದ ಆಳ್ವ, ದಿವಾಕರ್, ಪೂವಪ್ಪ ಸುರುಳಿಮೂಲೆ, ಜಯಂತಿ ರಾವ್, ಶುಭಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ನಡೆದ ಬಳಿಕ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ವಿಟ್ಲ ಪೇಟೆಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ, ನಮ್ಮ ಆಡಳಿತವನ್ನು ಮೆಚ್ಚಿ ಮತನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯ ಕುಮಾರ್ ಆಲಂಗಾರು, ನಿಕಟಪೂರ್ವ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರ್, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಹರೀಶ್ ಸಿಎಚ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಪ್ರಕಾಶ್, ಪ್ರಾಥಮಿಕ ಕೃಷಿ ಬ್ಯಾಂಕ್ ಅಧ್ಯಕ್ಷ ನರ್ಸಪ್ಪ ಪೂಜಾರಿ, ಪ್ರಮುಖರಾದ ಮೋಹನದಾಸ್ ಉಕ್ಕುಡ, ಅಣ್ಣು ಪೂಜಾರಿ, ಅರುಣ್ ವಿಟ್ಲ, ಸುಧಾಕರ್ ಶೆಟ್ಟಿ, ವಸಂತ್ ಎರುಂಬು, ಜಯಂತ್ ಸಿಎಚ್, ಮಾತೇಶ್ ಭಂಡಾರಿ, ನವೀನ್ ಕನ್ಯಾನ, ಸದಾನಂದ ಗೌಡ ಸೇರಾಜೆ, ಲಕ್ಷ್ಮಣ ಮಾಡ, ಶಿಶಿರ್ ಗೌಡ, ನಿತಿನ್ ಬೊಡ್ಡೋಣಿ, ರವಿಶಂಕರ್ ವಿಟ್ಲ, ಚಂದ್ರಕಾಂತಿ ಶೆಟ್ಟಿ, ಉಷಾ ಕೃಷ್ಣಪ್ಪ, ಸಂಜೀವ ಪೂಜಾರಿ, ಮೋನಪ್ಪ ಗೌಡ ಶಿವಾಜಿನಗರ, ಜತ್ತಪ್ಪ ಬಿ, ರವೀಶ್ ಕೂಡೂರು, ಕೃಷ್ಣ ಎನ್, ವಸಂತ್ ಕುಲಾಲ್, ಶಶಿಕಾಂತ್ ಪ್ರಭು, ಅಭಿಜಿತ್ ಸಾಲ್ಯಾನ್, ಮಂಜುನಾಥ್ ಕಲ್ಲಕಟ್ಟ, ಜಗದೀಶ್ ಪಾಣೆಮಜಲು, ಸುಧೀರ್ ನಾಯ್ಕ್, ನಯವಂತ ರೈ, ರವಿಕಿರಣ್ ಕನ್ಯಾನ, ಕೃಷ್ಣ ಮುದೂರು ಉಪಸ್ಥಿತರಿದ್ದರು.