ಪುತ್ತೂರು: ಹಾರಾಡಿಯ ಗ್ಯಾರೇಜ್ ವೊಂದರಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದ ಯಮಹಾ R X 100 ಬೈಕ್‌ನ್ನು ಗ್ಯಾರೇಜ್ ಶೆಟರ್‌ನ ಬೀಗ ಒಡೆದು ಕಳವು ಮಾಡಿರುವ ಘಟನೆ ಮಾ.9 ರಂದು ಬೆಳಕಿಗೆ ಬಂದಿದೆ.
ಪುತ್ತೂರಿನ ಸಾಲ್ಮರ ನಿವಾಸಿ ಜಗದೀಶ್ ಆಚಾರ್ಯರವರು R X 100 ಬೈಕ್‌ನ್ನು ಹಾರಾಡಿ ಗ್ಯಾರೇಜ್ ವೊಂದರಲ್ಲಿ ರಿಪೇರಿಗಾಗಿ ನಿಲ್ಲಿಸಿದ್ದರು.
ಮಾ.10ರಂದು ಬೈಕ್ ತೆಗೆದುಕೊಂಡು ಹೋಗುವ ಕುರಿತು ಗ್ಯಾರೇಜ್ ಮಾಲಕರೊಂದಿಗೆ ಮಾತುಕತೆ ನಡೆದಿತ್ತು. ಆದರೆ ಮಾ.9 ರಂದು ಬೆಳಗ್ಗೆ ಗ್ಯಾರೇಜ್‌ನ ಶೆಟರ್ ಬೀಗ ಒಡೆದಿರುವುದನ್ನು ಗಮನಿಸಿದ ಗ್ಯಾರೇಜ್ ಮಾಲಕರು ಒಳಗೆ ನೋಡಿದಾಗ ಯಮಹಾ R X 100 ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.