ಮೂಡುಬಿದಿರೆ: ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತಿದ್ದ ಯುವಕ, ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದಿರೆ ಕಡೆಪಲ್ಲ ನಿವಾಸಿ ವಿಜೇಶ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಬ್ರಹ್ಮಕಲಶ, ಕಂಬಳ ಹಾಗೂ ಜಾತ್ರೆಗಳ ಸಂದಭ೯ಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅನಾರೋಗ್ಯ ಪೀಡಿತರಿಗೆ ಧನಸಹಾಯ ಮಾಡುತ್ತಿದ್ದರು.
ವಿಜೇಶ್ ಅವರಿಗೆ ಕಳೆದ 10 ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆಗೆ ಸ್ಪಂದಿಸದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಮೃತರು ತಾಯಿ ಮತ್ತು ಸಹೋದರನನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ವಿಜೇಶ್ ಅವರು ಮೂಡಬಿದರೆ ಬಜಂಗದಳದ ನಗರ ಸಂಯೋಜಕರಾಗಿದ್ದು ಹಿಂದೂ ಸಂಘಟನೆ ಮತ್ತು ನೇತಾಜಿ ಬ್ರಿಗೇಡ್ ನ ಸಕ್ರೀಯ ಕಾಯ೯ಕತ೯ರಾಗಿದ್ದು, ನಿರಂತರವಾಗಿ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದರು.