ಪುತ್ತೂರು; ಚುನಾವಣೆಯಲ್ಲಿ ಗೆದ್ದು ಶಾಸಕರಾದವರ ಹೆಸರು ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಚಿರಪರಿಚಿತವಾಗುವುದು ಸಹಜ. ಆದರೆ ಮೊದಲ ಬಾರಿಗೆ ಶಾಸಕರಾಗಿ ರಾಜ್ಯಮಟ್ಟದಲ್ಲಿ ಹೆಸರು ಮಾಡುವುದು ಕೆಲವೇ ಕೆಲವರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತನ್ನ ವಿಭಿನ್ನ ಯೋಚನೆಗಳಿಂದ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಖ್ಯಾತಿ ಪುತ್ತೂರಿನ ಅಶೋಕ್ ರೈ ಅವರದ್ದಾಗಿದೆ. ಇದೀಗ ೫ ನೇ ತರಗತಿಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲೂ ಅಶೋಕ್ ರೈ ಅವರ ಹೆಸರು ಕಾಣಿಸಿಕೊಂಡಿದೆ.
ಸಾಂದೀಪನಿ ಶಾಲೆಯ5 ನೇ ತರಗತಿಯ ಇಂಗ್ಲೀಷ್ ಭಾಷಾ ಪರೀಕ್ಷೆಯಲ್ಲಿ ಬಿಟ್ಟ ಪದಗಳನ್ನು ತುಂಬಿಸುವ ಪ್ರಶ್ನೆಯಲ್ಲಿ ಅಶೋಕ್ ರೈ ಈಸ್ --- ಎಂಎಲ್‌ಎ ಆಫ್ ಪುತ್ತೂರು' ಎಂದು ನೀಡಲಾಗಿದೆ. ತನ್ನ ಮೊದಲ ವಿಧಾನಸಭಾ ಅಧಿವೇಶನದಲ್ಲಿಯೇ 13ಕ್ಕೂ ಪ್ರಶ್ನೆಗಳನ್ನು ಎತ್ತುವ ಮೂಲಕ
ಪುತ್ತೂರು ಎಂಎಲ್‌ಎ’ ಆಗಿ ತನ್ನನ್ನು ಗುರುತಿಸಿಕೊಂಡ ಅಶೋಕ್ ರೈ ಅವರು ಅಧಿವೇಶನದಲ್ಲಿ ತುಳು ಭಾಷೆಯಲ್ಲಿ ಮಾತನಾಡಿ ತುಳುನಾಡಿನ ಜನತೆಯ ಪ್ರೀತಿಗೆ ಪಾತ್ರವಾಗಿದ್ದರು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ ನಡೆಸುವ ಮೂಲಕ ರಾಜ್ಯಮಟ್ಟದ ಗಮನ ಸೆಳೆಯುವ ಜತೆಗೆ ಅಶೋಕ್ ರೈ ಅವರು ತನ್ನ ಛಾಪನ್ನು ರಾಜ್ಯಮಟ್ಟದಲ್ಲಿ ಬೆಳೆಸಿಕೊಂಡಿದ್ದರು. ಬಹು ಆಕಾಂಕ್ಷಿತ ಪುತ್ತೂರಿಗೆ ಮೆಡಿಕಲ್ ಕಾಲೇಜು ರಾಜ್ಯ ಬಜೆಟ್ ನಲ್ಲಿ ಪ್ರಸ್ತಾಪವಾಗುವಂತೆ ಮಾಡುವ ಮೂಲಕ ಮತ್ತಷ್ಟು ಖ್ಯಾತಿ ಪಡೆದರು.
ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾದ ಅಶೋಕ್ ರೈ ಅವರ ಹೆಸರು ಅಭಿವೃದ್ಧಿ ದೃಷ್ಟಿಯಿಂದಲೂ ವಿಧಾನಸಭಾ ಕ್ಷೇತ್ರದಾದ್ಯಂತ ಮಾತ್ರವಲ್ಲ ದಕ ಜಿಲ್ಲೆಯಲ್ಲಿಯೂ ಹೆಚ್ಚು ಜನಪ್ರೀಯ.