ಪುತ್ತೂರು : ಮೈಸೂರು ಮುಕ್ತ ವಿಶ್ವವಿದ್ಯಾಲಯ ಮುಕ್ತ ಗಂಗೋತ್ರಿ ಮೈಸೂರು ಇಲ್ಲಿ ನಡೆದ ಎಂಎಸ್ಸಿ ( ಪ್ರಾಣಿಶಾಸ್ತ್ರ) ಸ್ನಾತಕೋತ್ತರ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕಿ ಹಾಗೂ ಸಂಯೋಜಕಿ ಶ್ರೀದೇವಿ ಕೆ ಹೆಗ್ಡೆ ಇವರು ಶೇಕಡಾ 78.95 ಅಂಕ ಹಾಗೂ 8.13 CGPA ಯೊಂದಿಗೆ ದ್ವಿತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.
ಪರ್ಲಡ್ಕ ನಿವಾಸಿ, ಶ್ರೀನಿವಾಸ್ ಹೆಗ್ಡೆ ಹಾಗೂ ಶೋಭಾ ದಂಪತಿ ಪುತ್ರಿಯಾಗಿರುವ ಇವರು ಉದ್ಯಮಿ ಕೊಂಬೆಟ್ಟು ನಿವಾಸಿ ಗಣೇಶ್ ಪೈ ಯವರ ಪತ್ನಿ.