ಶಿವಮೊಗ್ಗ: ಮದುವೆ ಎನ್ನುವುದು ಏಳೇಳು ಜನುಮಗಳ ಅನುಬಂಧ ಅಂತಾರೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎನ್ನಲಾಗುತ್ತೆ. ಹೌದು.. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪ ಮೌನೇಶ್, ಗಂಡನನ್ನು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ 32 ವರ್ಷದ ವಿಧವೆ ದೀಪಿಕಾಳನ್ನು ಮದ್ವೆಯಾಗಿ ಬಾಳು ಕೊಟ್ಟಿದ್ದ. ಆದ್ರೆ, ಇಲ್ಲಿ ವಿಧವೆ ಎಂದು ಬಾಳು ಕೊಟ್ಟು ಮದುವೆಯಾದ ಯುವಕನ ಜೀವನದಲ್ಲಿ ಕೇವಲ ಐದಿನೈದೇ ದಿನಕ್ಕೆ ಬರಸಿಡಿಲು ಬಡಿದಿದೆ.
ಮದ್ವೆ ಬಳಿಕ ಬೈಕ್‌ನಲ್ಲಿ ಸುತ್ತಾಡುವುದೇನು, ಒಬ್ಬರನ್ನೊಬ್ಬರು ಅಪ್ಪಿಕೊಂಡು ಪೋಸ್ ಕೊಡುವುದೇನು, ರೀಲ್ಸ್ ವಿಡಿಯೋಗಳೇನು. ಅಬ್ಬಬ್ಬಾ ಈ ಜೋಡಿ ಮಾದರಿ ಜೋಡಿ ಎನ್ನುವಂತಿತ್ತು. ಆದ್ರೆ, ನೂರ್ಕಾಲ ಜತೆಯಾಗಿ ಇರುತ್ತೇನೆ ಎಂದು ಮಾತುಕೊಟ್ಟು ಸಪ್ತಪದಿ ತುಳಿದವಳು 15ದಿನಕ್ಕೆ ಗಂಡನ ಬಿಟ್ಟು ಪರಾರಿಯಾಗಿದ್ದಾಳೆ. ವಿಧವೆ ಅಂತಾ ಬಾಳು ಕೊಟ್ಟವನ ಬದುಕಲ್ಲಿ ಚೆಲ್ಲಾಟವಾಡಿದ್ದಾಳೆ.
ಅಂದಾಗೆ ಈ ಜೋಡಿಯ ಹೆಸರು ಮೌನೇಶ್ ಮತ್ತು ದೀಪಿಕಾ. ತಂದೆ ತಾಯಿ ಇಲ್ಲದ ಅನಾಥನಾಗಿರುವ ಮೌನೇಶ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪದಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ದೀಪಿಕಾಗೆ ಈಗಾಗಲೇ ಮದ್ವೆಯಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾಳೆ. ಆದ್ರೆ, 10 ವರ್ಷಗಳ ಹಿಂದೆಯೇ ಗಂಡನನನ್ನು ಕಳೆದುಕೊಂಡಿದ್ದಾಳೆ. ಆದರೂ ಸಹ ಮೌನೇಶ್, 32ವರ್ಷದ ವಿಧವೆ ದೀಪಿಕಾ ಎನ್ನುವಳಿಗೆ ಬಾಳುಕೊಟ್ಟಿದ್ದ. ಫೆಬ್ರವರಿ 7ರಂದು ನವುಲೆಯ ಚೌಡೇಶ್ವರಿ ದೇವಾಲಯದಲ್ಲಿ ಸರವಾಗಿ ವಿವಾಹವಾಗಿದ್ದರು. ಇಬ್ಬರು ಧರ್ಮಸ್ಥಳ ಸೇರಿ ವಿವಿಧ ದೇವಾಲಯಗಳಿಗೆ ಹೋಗಿ ಬಂದಿದ್ರು. ಆದ್ರೆ, ಮದುವೆಯಾದ 2 ದಿನಕ್ಕೆ ತವರು ಮನೆ ಸೇರಿದ್ದವಳು 15ದಿನಕ್ಕೆ ಗಂಡನಿಗೆ ಕೈಕೊಟ್ಟ ಎಸ್ಕೇಪ್ ಆಗಿದ್ದಾಳೆ.
ಇನ್ನು ದೀಪಿಕಾ ಪರಾರಿ ಕೇಸ್‌ಗೆ ಟ್ವಿಸ್ಟ್‌ಸಿಕ್ಕಿದ್ದು, ಮೌನೇಶ್ ಹಾಗೂ ದೀಪಿಕಾ ದಂಪತಿ ಬಾಳಲ್ಲಿ ಚಿಕ್ಕಮಗಳೂರು ತಾಲೂಕಿನ ಕಳಸ ಠಾಣೆ ಎಎಸ್ಐ ಪೂರ್ಣೇಶ್ ಹುಳಿ ಹಿಂಡಿರುವ ಆರೋಪ ಕೇಳಿಬಂದಿದೆ. ಪೂರ್ಣೇಶ್ ಎನ್ನುವರು ಕೆಲ ವರ್ಷಗಳಿಂದ ದೀಪಿಕಾ ಪರಿಚಯ ಇದ್ದು. ದೀಪಿಕಾ ಹೆಸರಲ್ಲಿ 2 ಎಕರೆ ಜಮೀನು ಸಹ ಇತ್ತು. ಇದರ ಮೇಲೆ ಕಣ್ಣಿಟ್ಟಿರುವ ಎಸ್‌ಎಐ ಪೂರ್ಣೇಶ್, ಈಕೆ ಜತೆ ಸಂಬಂಧ ಇಟ್ಟುಕೊಂಡು ನಮ್ಮಿಬ್ಬರ ನಡುವೆ ತಂದಿಟ್ಟಿದ್ದಾನೆ ಎಂದು ಮೌನೇಶ್ ಆರೋಪಿಸಿದ್ದಾರೆ.
ಕೆಲ ಯುವಕರ ಕರೆತಂದು ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ನನ್ನ ಪತ್ನಿಯಿಂದಲೇ ನನ್ನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ಕೊಡಿಸಿದ್ದಾನೆ. ಎಎಸ್‌ಐ ಪೂರ್ಣೇಶ್ ವಿರುದ್ಧ ಆರೋಪಿಸಿದ್ದಾನೆ. ಅಲ್ಲದೇ ಎಸ್‌ಪಿಗೂ ದೂರು ಕೊಡುವುದಾಗಿ ಹೇಳಿದ್ದಾನೆ ಮೌನೇಶ್ ಅಳಲು ತೋಡಿಕೊಂಡಿದ್ದಾನೆ.
ಒಟ್ಟಿನಲ್ಲಿ ವಿಧವೆಗೆ ಬಾಳು ಕೊಟ್ಟ ಅನಾಥ ಯುವಕ ಮೌನೇಶ್ ಸಂಕಷ್ಟಕ್ಕೆ ಸಿಲುಕಿದ್ದು, ಪತ್ನಿ ಆದಷ್ಟು ಬೇಗ ವಾಪಸ್ ಬರಲಿ ಎಂದು ಕಾಯುತ್ತಿದ್ದಾನೆ.