ಮಂಗಳೂರು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಘಟನೆ ಇಂದು (ಮಾ.15) ಮುಂಜಾನೆ ಮಂಗಳೂರಿನ ಕುಲಶೇಖರ ಕೈಕಂಬ ಬಳಿ ನಡೆದಿದೆ.
ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಸ್ಕೂಟರ್‌ನಲ್ಲಿದ್ದ 100ಕೆ.ಜಿ.ಗೂ ಅಧಿಕ ದನದ ಮಾಂಸ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಭಜರಂಗದಳ ಕಾರ್ಯಕರ್ತರು ಸ್ಕೂಟರನ್ನು ತಡೆಯುತ್ತಿದ್ದಂತೆ ಸ್ಕೂಟರ್ ಸವಾರ ಗಾಡಿ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಬಳಿಕ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

























