ಪುತ್ತೂರು: ಬಸ್ ನಿಲ್ದಾಣದ ಬಳಿಯ ಹೋಟೆಲ್ ಒಂದರಲ್ಲಿ ಭಿನ್ನಮತೀಯ ಜೋಡಿಯೊಂದು ಜ್ಯೂಸ್ ಕುಡಿಯುತ್ತಿದ್ದ ಸಂದರ್ಭ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಇಬ್ಬರು ಶಿವಮೊಗ್ಗ ಮೂಲದವರು ಎಂದು ತಿಳಿದು ಬಂದಿದ್ದು ಯುವತಿ ನಗರ ದಲ್ಲಿ ಪಿಜಿ ಯಿಂದ ಕಾಲೇಜಿಗೆ ತೆರಳುತ್ತಿದ್ದಳು ಎಂದು ತಿಳಿದು ಬಂದಿದೆ.
ಠಾಣೆಗೆ ಪುತ್ತೂರು ಬಿಜೆಪಿ ನಿಯೋಗ ಬೇಟಿ ನೀಡಿತ್ತು ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ ಪೊಲೀಸರು ಇಬ್ಬರ ಮನೆಯವರಿಗೆ ಮಾಹಿತಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.