ಪುತ್ತೂರು: ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು HEF ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪುತ್ತೂರಿನ ಏಳ್ತಿಮಾರ್ ಟ್ರೇಡರ್ಸ್ ಮಾಲಕರಾದ ಶ್ರೀಮತಿ ವಿಜಯಲಕ್ಷ್ಮಿ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾರಾಟ ಮತ್ತು ಗ್ರಾಹಕ ಸೇವೆಯ ಅಗತ್ಯತೆ, ವ್ಯಾಪಾರ ಜೀವನದ ಹಾದಿ ಮತ್ತು ಸವಾಲುಗಳು, ವ್ಯವಹಾರದಲ್ಲಿ ಎದುರಿಸುವ ಸವಾಲುಗಳನ್ನು ಹೇಗೆ ನಿಭಾಯಿಸಬೇಕು, ಯುವ ಜನತೆಗೆ ಉದ್ಯಮಶೀಲತೆಯ ಮಹತ್ವ, ತಂತ್ರಜ್ಞಾನ ಮತ್ತು ಮಾರಾಟ, ಯುವ ಜನರಿಗೆ ಉದ್ಯಮಶೀಲತೆಯ ಮಹತ್ವಗಳ ಕುರಿತು ಮಾಹಿತಿ ನೀಡಿದರು.

ಸಂವಾದದ ಬಳಿಕ ವಿಜಯಲಕ್ಷ್ಮಿ ಶೆಣೈ ಅವರು ವಿದ್ಯಾರ್ಥಿಗಳಿಗೆ ಅಣಕು ಮಾರ್ಕೆಟಿಂಗ್ ಅಭ್ಯಾಸದ ಚಟುವಟಿಕೆ ಯನ್ನು ಮಾಡಿಸಿದರು. ಇದರಲ್ಲಿ ವಿದ್ಯಾರ್ಥಿಗಳು ಒಂದೊಂದು ವಸ್ತುಗಳನ್ನು ಇತರರಿಗೆ ಮಾರ್ಕೆಟ್ ಮಾಡಿ , Sales and marketing ನ ಒಂದು ಕಿರು ಅನುಭವವನ್ನು ಪಡೆದುಕೊಂಡರು.
ಪುತ್ತೂರು ಮುಳಿಯ ಜ್ಯುವೆಲ್ಲರ್ಸ್‍ನ ಆಡಳಿತ ನಿರ್ದೇಶಕಿ, ಹೆಚ್‍ಇಎಫ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮವನ್ನು ನಿರ್ದೇಶಿಸಿದರು.
ಮೆಕ್ ಮಾರ್ಕೆಟಿಂಗ್ ನಿರ್ದೇಶಕಿ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಶ್ರೀಮತಿ ಶರಾವತಿ ರವಿನಾರಾಯಣ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನಭಾಗ್, ಸಂಚಾಲಕರಾದ ಸಂತೋಷ್ ಬಿ, ಜೆಸಿ ತರಬೇತುದಾರರಾದ ಕೃಷ್ಣ ಮೋಹನ್ ,ಹೆಚ್‍ಇಎಫ್ ಮಹಿಳಾ ಘಟಕದ ಸದಸ್ಯರಾದ ಮಹಾಲಕ್ಷ್ಮಿ ಕೊಂಬೆಟ್ಟು ಹಾಗೂ ಶೈಲಾ ರಾಜೇಶ್ ಉಪಸ್ಥಿತರಿದ್ದರು. ಹೆಚ್‍ಇಎಫ್ ಯುವ ಘಟಕದ ಅಧ್ಯಕ್ಷ ಮುಕುಂದ ಶ್ಯಾಮ್, ಕಾರ್ಯದರ್ಶಿ ಪುನೀತ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.