ಪುತ್ತೂರು: ಮಹಿಳೆಯೋರ್ವರು ಮನೆಯಂಗಳದ ಗೇರು ಮರದ ಕೊಂಬೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡ ಘಟನೆ ಮ.21 ರಂದು ಕೊಡಿಪ್ಪಾಡಿ ಗ್ರಾಮದ ಕುದ್ಮಾನ್ ಎಂಬಲ್ಲಿ ನಡೆದಿದೆ.
ಕುದ್ದಾನ್ ನಿವಾಸಿ ಲಲಿತಾ ಅವರು ಆತ್ಮಹತ್ಯೆ ಮಾಡಿಕೊಂಡವರು. ಅವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆ ಹಿಂಬದಿಯ ಅಂಗಳದಲ್ಲಿರುವ ಗೇರು ಮರದ ಕೊಂಬೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಕಾಗದ ಪತ್ರ ಲಭಿಸಿದ್ದು, ಅದರಲ್ಲಿ ‘ನನ್ನ ಮರಣಕ್ಕೆ ನನ್ನ ಅನಾರೋಗ್ಯ ಕಾರಣ ಎಂದು ಬರೆದಿರುವುದು ಕಂಡು ಬಂದಿದೆ.
ಮೃತರ ಪುತ್ರ ಸತೀಶ್ ಕೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.