ಬೆಂಗಳೂರು: ಪ್ರೀತಿಯಲ್ಲಿ ಬಿದ್ದವರಿಗೆ ಲೋಕದ ಪರಿವೇ ಇರಲ್ಲ ಅಂತಾರೆ. ಈ ಮಾತನ್ನು ನಿಜವೆಂದು ಪಾರ್ಕ್ , ಬಸ್, ಟ್ರೈನ್, ಬಸ್‌ಸ್ಟ್ಯಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಮೈ ಮರೆತು ಕಿಸ್ಸಿಂಗ್-ರೊಮ್ಯಾನ್ಸ್ ಮಾಡುವ ಕೆಲ ಪ್ರೇಮಿಗಳು ಆಗಾಗ್ಗೆ ತೋರಿಸಿಕೊಡುತ್ತಾರೆ.
ಇವರ ಅತಿರೇಕದ ವರ್ತನೆಗಳು ಇತರರಿಗೂ ಮುಜುಗರವನ್ನು ಉಂಟು ಮಾಡುತ್ತದೆ. . ಕ್ಯಾಬ್‌ನಲ್ಲೂ ಆಗುವಂತಹ ಇಂತಹ ನಾಚಿಕೆಗೇಡಿನ ಘಟನೆಗಳಿಂದ ಬೇಸತ್ತು ಬೆಂಗಳೂರಿನ ಕ್ಯಾಬ್ ಡ್ರೈವರ್ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ವಾರ್ನಿಂಗ್ ಬೋರ್ಡ್ ಒಂದನ್ನು ಕ್ಯಾಬ್‌ನಲ್ಲಿ ನೇತು ಹಾಕಿದ್ದಾನೆ.

ಈ ಎಚ್ಚರಿಕೆ ಫಲಕದ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬೆಂಗಳೂರಿನ ಕ್ಯಾಬ್ ಡ್ರೈವರ್ ತನ್ನ ಕ್ಯಾಬ್‌ನಲ್ಲಿ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ಎಂಬ ಎಚ್ಚರಿಕೆ ಫಲಕವನ್ನು ಕ್ಯಾಬ್‌ನಲ್ಲಿ ನೇತು ಹಾಕುವ ಮೂಲಕ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರೇಮಿಗಳು ಮಿತಿಮೀರಿ ವರ್ತಿಸಬಾರದು ಎಂದು ವಾರ್ನಿಂಗ್ ನೀಡಿದ್ದಾನೆ.
ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.