ವಿನೂತನ ಯುವಕ ಮಂಡಲ (ರಿ ) ಬೊಳಂತಿಮೊಗರು ಇದರ ಆಶ್ರಯದಲ್ಲಿ ನಡೆದ 23 ನೆ ವರ್ಷದ 2 ದಿನಗಳ ಕ್ರಿಕೆಟ್ ಪಂದ್ಯಕೂಟ ನಡೆಸಿ ಉಳಿಸಿದ ಮೊತ್ತವನ್ನು ಮೊದಲ ಹಂತವಾಗಿ ಅನಾರೋಗ್ಯ ಪೀಡಿತರಾಗಿರುವ ಶ್ರೀನಿವಾಸ್ ಪೂಜಾರಿ ಕಾಮಟ ಇವರ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಹಸ್ತವಾಗಿ ನೀಡಲಾಯಿತು.

ಈ ಸಂಘಟನೆಯು ಹಲವು ವರ್ಷಗಳಿಂದ ಇಂತಹ ಹಲವಾರು ಸಾಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿರುತ್ತದೆ. ಇನ್ನು ಮುಂದೆಯೂ ಸಂಘಟನೆ ಇದೆ ತರ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತೇವೆ. ಇನ್ನೊಂದು ಹಂತದ ಮೊತ್ತವನ್ನು ಸದ್ಯದಲ್ಲಿಯೇ ಒಂದು ಅಶಕ್ತ ಕುಟುಂಬಕ್ಕೆ ನೀಡಲಾಗುವುದು ಹಾಗೂ ಸಹಕರಿಸಿದ ಎಲ್ಲಾ ಕ್ರೀಡಾಪಟುಗಳು ಕ್ರೀಡಾಭಿಮಾನಿಗಳಿಗೆ ಹಾಗೂ ಯುವಕಮಂಡಲದ ಸದಸ್ಯರಿಗೆ ಹಾಗೂ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅಧ್ಯಕ್ಷರಾದ ವಿನೋದ್ ಶೆಟ್ಟಿ ನಡುವಡ್ಕ ಇವರು ತಿಳಿಸಿರುತ್ತಾರೆ.