ಚೆನ್ನೈ: ಕಾಲಿವುಡ್ ಚಿತ್ರರಂಗದ ಯುವ ನಟಿಯೊಬ್ಬರ ಖಾಸಗಿ ವಿಡಿಯೋ ಸೋರಿಕೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
24 ವರ್ಷದ ನಟಿ ಶ್ರುತಿ ನಾರಾಯಣನ್ (Shruthi Narayanan) ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಖಾಸಗಿ ಅಡಿಷನ್ ಸಮಯದಲ್ಲಿ ಶ್ರುತಿ ನಾರಾಯಣನ್ ಅವರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಕೇಳುವ ಸಂದರ್ಭದಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎನ್ನಲಾಗುತ್ತಿದೆ.
14 ನಿಮಿಷದ ಈ ವಿಡಿಯೋ ಈಗ ಲೀಕ್ ಆಗಿದ್ದು, ‘ಎಕ್ಸ್’, ಇನ್ಸಾಗ್ರಾಮ್, ಟೆಲಿಗ್ರಾಮ್‌ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ನಟಿಯ ಖಾಸಗಿ ವಿಡಿಯೋ ವೈರಲ್ ಚಿತ್ರರಂಗದ ಕರಾಳ ಮುಖವಾಡದ ಬಗ್ಗೆ ಚರ್ಚೆ ಶುರುವಾಗಿದೆ.
ಈ ವಿಡಿಯೋದಲ್ಲಿ ಶ್ರುತಿ ಅವರೇ ಇದ್ದಾರೆ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇದು ಡೀಪ್ ಫೇಕ್ ವಿಡಿಯೋವೆಂದು ಹೇಳುತ್ತಿದ್ದಾರೆ.
ಸದ್ಯ ಈ ವಿಡಿಯೋ ಬಗ್ಗೆ ನಟಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ತನ್ನ ಇನ್ಸಾಗ್ರಾಮ್ ಖಾತೆಯನ್ನು ಖಾಸಗಿಯಾಗಿ ಬದಲಾಯಿಸಿದ್ದರು.
ಆ ಬಳಿಕ ಮತ್ತೆ ಪಬ್ಲಿಕ್ ಆಗಿ ಬದಲಾಯಿಸಿದ್ದಾರೆ. ಅವರು 40k ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದಲ್ಲದೆ ಅವರು ‘ಎಐ’ ಬಗೆಗಿನ ವಿಡಿಯೋವೊಂದನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ತಮಿಳು ಕಿರುತೆರೆಯಿಂದ ವೃತ್ತಿ ಬದುಕಿ ಆರಂಭಿಸಿದ ಅವರು, ‘ಸಿರಾಗಡಿಕ್ಕ ಆಸೈ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
ಇದಲ್ಲದೆ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು, ‘ಸಿಟಾಡೆಲ್: ಹನಿ ಬನ್ನಿ’ (2024), ‘ಕಾರ್ತಿಗೈ ದೀಪಂ’ (2022), ಮತ್ತು ‘ಮಾರಿ’ (2022) ಚಿತ್ರಗಳಲ್ಲಿ ನಟಿಸಿದ್ದಾರೆ.