ಪುತ್ತೂರು: ತಲ್ವಾರ್ ಬೀಸಿ ಹಲ್ಲೆಗೆ ಮುಂದಾದ ಘಟನೆ ಪುತ್ತೂರಿನ ಸಂಪ್ಯದಮೂಲೆ ಎಂಬಲ್ಲಿ ನಡೆದಿದೆ.
ಸಂಪ್ಯದಮೂಲೆ ನಿವಾಸಿ ಕೃಷಿಕ ರೇಖಾನಾಥ್ ರೈ ಯವರ ಸಹೋದರಿ ಪುಷ್ಪಾವತಿ ರೈ ಯವರಿಗೆ ಹಸೈನಾರ್ ಎಂಬಾತ ತಲ್ವಾರ್ ಹಿಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದಾನೆ.

ಸದ್ಯ ಆತನ ವಿರುದ್ಧ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.