ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ, ಮೋಸ್ಟ್ ಬ್ಯೂಟಿಫುಲ್ ಹೀರೋಯಿನ್ ರಾಗಿಣಿ ದ್ವಿವೇದಿ ಅವರು ಯಾವಾಗಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಆಗಾಗ ತಮ್ಮ ಫೋಟೋಸ್ನಿಂದ ಅಪ್ಡೇಟ್ ಕೊಡುತ್ತಾರೆ. ಅದರಂತೆ ಇದೀಗ ಯುಗಾದಿ ಹಬ್ಬಕ್ಕೆ ದುಂಡು ಮಲ್ಲಿಗೆ ಹೂವುಗಳ ಹಾರದ ಬ್ಲೌಸ್ ತೊಟ್ಟು ಸ್ಪೆಷಲ್ ಲುಕ್ ಕೊಟ್ಟಿದ್ದಾರೆ.
ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಅವರು ಈ ಬಾರಿ ತುಂಬಾ ವಿಭಿನ್ನವಾಗಿ, ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡ್ ಕಲರ್ ಸ್ಯಾರಿಯಲ್ಲಿ ಕಾಣಸಿರುವ ರಾಗಿಣಿ, ದುಂಡು ಮಲ್ಲಿಗೆ ಹೂವುಗಳ ಹಾರದಿಂದ ತಯಾರಿಸಿದ ರವಿಕೆ ಧರಿಸಿ ಮೋಹಕವಾಗಿ, ಮನಮೋಹಕವಾಗಿ ಪೋಸ್ ಕೊಟ್ಟಿದ್ದಾರೆ. ಒಂದೊಂದು ಫೋಟೋ ಕೂಡ ಯುವಕರ ಕಣ್ಮನ ಸೆಳೆಯುವಂತೆ ಸೊಗಸಾಗಿ ಇವೆ.