ಅಂಡಿಂಜೆ: ಇಲ್ಲಿನ ಕಿಲಾರದ ಮಾರಿಕಾಂಬ ದೇವಸ್ಥಾನದ ಬಳಿಮಾ. 31ರಂದು ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮಂಗಳಾದೇವಿ ಮೇಳದ ಭಾಗವತರಾದ ಸತೀಶ್ ಆಚಾರ್ಯ ವೇಣೂರು ಮೃತಪಟ್ಟಿದ್ದಾರೆ.
ಯಕ್ಷಗಾನಕ್ಕೆ ಬೈಕ್ ನಲ್ಲಿ ತೆರಳಿದ್ದ ಸತೀಶ್ ಆಚಾರ್ಯರವರು ಅಂಡಿಂಜೆಯ ಮನೆಗೆ ತೆರಳುತ್ತಿದ್ದ ವೇಳೆ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ರಸ್ತೆಗೆ ತಲೆ ಅಪ್ಪಳಿಸಿದ್ದರಿಂದ ಸಾವನ್ನಪ್ಪಿದ್ದಾರೆ.
ಮುಂಜಾನೆ 4 ಗಂಟೆ ವೇಳೆಗೆ ಅಪಘಾತ ನಡೆದಿರುವುದಾಗಿ ತಿಳಿದುಬಂದಿದೆ.