ಪುತ್ತೂರು: ಪುರುಷರ ಸಿದ್ಧ ಉಡುಪುಗಳ ಮಳಿಗೆ We Fashion ಪುತ್ತೂರಿನ ಬೊಳ್ವಾರಿನ ಧ್ರುವ ಸಂಕೀರ್ಣದಲ್ಲಿ ಶುಭಾರಂಭ ಗೊಳ್ಳಲಿದೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅರಿಕೋಡಿ ಇಲ್ಲಿಯ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಶ್ಚಂದ್ರ ಕಳೆಂಜ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಟೌನ್ ಬ್ಯಾಂಕ್ ನಿರ್ದೇಶಕರಾದ ಕಿರಣ್ ಕುಮಾರ್ ರೈ ಬಲ್ನಾಡ್, ಬಜರಂಗದಳದ ನಿಕಟಪೂರ್ವ ಪ್ರಾಂತ ಸಹ ಸಂಯೋಜಕ್ ಮುರುಳಿಕೃಷ್ಣ ಹಸಂತ್ತಡ್ಕ, ಕೋಕೋ ಗುರು ಆಯಿಲ್ ಮಿಲ್ಕ್ ನ ಮಾಲಕರಾದ ಸಂತೋಷ್ ಬೊನಂತ್ತಾಯ, ಅಪರ ಸರಕಾರಿ ವಕೀಲರಾದ ಅರುಣ್ ಬಿಕೆ, ನಗರಸಭಾ ಅಧ್ಯಕ್ಷರಾದ ಲೀಲಾವತಿ, ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ಫ್ಯಾಷನ್ ಜೋನ್ ಮಾಲಕ ಸುನಿಲ್ ಬಲ್ನಾಡ್, ವಿಹಿಂಪ ನ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಯುವಮೋರ್ಚಾ ನಗರ ಮಂಡಲದ ಅಧ್ಯಕ್ಷ ನಿತೇಶ್ ಪಡ್ಡಾಯೂರು, ಉಪಾಧ್ಯಕ್ಷ ಶರತ್ ಬಲ್ನಾಡ್ ಉಪಸ್ಥಿತರಿರಲ್ಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.