ಹಾಲಿನ ದರ, ಕರೆಂಟ್ ಬಿಲ್ ಏರಿಕೆಯ ಮಧ್ಯೆ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಡೀಸೆಲ್ ಮೇಲಿನ ಸೆಸ್ ದರ ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ರಾಜ್ಯಾದ್ಯಂತ ಜಾರಿಗೆ ಬರುತ್ತಿದೆ.
ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆ 2 ರೂಪಾಯಿ ಹೆಚ್ಚಳ ಮಾಡಿದೆ. ಡೀಸೆಲ್ ಮೇಲಿನ ಸೆಸ್ ಇದುವರೆಗೂ ಶೇಕಡಾ 18.44 ರಷ್ಟಿತ್ತು. ಇಂದು ಮಧ್ಯರಾತ್ರಿಯಿಂದ ಡೀಸೆಲ್ ಮೇಲಿನ ತೆರಿಗೆ ಶೇಕಡಾ 21.17ಕ್ಕೆ ಏರಿಕೆ ಮಾಡಲಾಗುತ್ತಿದೆ.
ಬೆಂಗಳೂರಲ್ಲಿ ಸದ್ಯ ಡೀಸೆಲ್ ಲೀಟರ್‌ಗೆ 89 ರೂಪಾಯಿ 2 ಪೈಸೆ ಇದ್ದು, ದರ ಏರಿಕೆ ಆದೇಶದ ಪ್ರಕಾರ 91 ರೂಪಾಯಿ 2 ಪೈಸೆಗೆ ಏರಿಕೆಯಾಗಲಿದೆ. ಡೀಸೆಲ್ 2 ರೂ. ದರ ಹೆಚ್ಚಳ ಮಾಡಿರೋದ್ರಿಂದ ನಾಳೆಯಿಂದ ಸಾಲು, ಸಾಲು ದರ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ.