ವಿಟ್ಲ : ಇಲ್ಲಿನ ಹೃದಯ ಭಾಗದ ನಾಲ್ಕು ರಸ್ತೆ ಜಂಕ್ಷನಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ತಕ್ಷಣವೇ ಸ್ಥಳೀಯ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಿಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದಂತಾಗಿದೆ.

ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನೆತ್ರಕೆರೆ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಮಾಲಿಕರಾದ ನೆತ್ರಕೆರೆ ನಿವಾಸಿ ಮಹೇಶ್ ಭಟ್ ಅವರು ದೇವರಿಗೆ ದೀಪ ಹಚ್ಚಿ ಅಗರಬತ್ತಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ಕೆಲ ಕ್ಷಣದಲ್ಲೇ ಅಂಗಡಿ ಒಳಗಡೆಯಿಂದ ಭಾರಿ ಪ್ರಮಾಣದಲ್ಲಿ ಹೊಗೆ ಬರಲಾರಂಭಿಸಿತು. ತಕ್ಷಣವೇ ಮಾಲಿಕರ ಕರೆಸಿ ಬಾಗಿಲು ತೆರೆದಾಗ ಬೆಂಕಿ ಕಾಣಿಸಿಕೊಂಡಿದೆ. ಕಿಟ್ ಕ್ಯಾಟ್ ಪೆಟ್ ಶಾಪ್ ಅಂಗಡಿ ಮಾಲಕ ಇಸ್ಮಾಯಿಲ್ ಒಕ್ಕೆತ್ತೂರು ಅವರು ತನ್ನ ಅಂಗಡಿಯಲ್ಲಿದ್ದ ಫೈರ್ ಗ್ಯಾಸ್ ನಿಯಂತ್ರಿಸುವ ಸೇಫೆಕ್ಸ್ ಯಂತ್ರದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ಹಾನಿಯಾಗಿದೆ. ಸುತ್ತಮುತ್ತ ಹಲವು ಅಂಗಡಿಗಳಿದ್ದು, ಯುವಕನ ಸಮಯ ಪ್ರಜ್ಞೆಯಿಂದಾಗಿ ಸರಣಿ ದುರಂತ ಸಂಭವಿಸುವುದು ತಪ್ಪಿದಂತಾಗಿದೆ.