ಪುತ್ತೂರು: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು (ರಿ.) ಹಾಗೂ ಸುಳ್ಯ ಬಂಟ್ವಾಳ ಮಂಗಳೂರು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಯಾದವ ಕ್ರೀಡಾಕೂಟ 2025 ದ.ಕ.ಜಿ.ಪ.ಮಾ.ಉ.ಹಿ.ಪ್ರಾ. ಶಾಲಾ ಮೈದಾನದಲ್ಲಿ ಎ. 06 ರಂದು ನಡೆಯಲಿದೆ.
ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣ ಬೊಳ್ಳಾಜೆ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಯಾದವಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಎ ಕೆ ಮಣಿಯಾಣಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿದ್ಯುತ್ ಸರಬರಾಜು ನಿಗಮ ಮಂಗಳೂರು ಇದರ ಕಿರಿಯ ಅಭಿಯಂತರರಾದ ವನಿತಾಕೆ ಯಾದವ್ ಮತ್ತು ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಇದರ ಅಧ್ಯಕ್ಷ ಧನಂಜಯ ಯಾದವ್ ಉಪಸ್ಥಿತರಿರಲಿದ್ದಾರೆ.
ಕ್ರೀಡಾಕೂಟದ ಮೆರವಣಿಗೆಗೆ ಯಾದವ ಸಭಾ ತಾಲೂಕು ಸಮಿತಿ ಪುತ್ತೂರು ಇದರ ಮಾಜಿ ಅಧ್ಯಕ್ಷರಾದ ನಾಗರಾಜನ್ ತಲಪ್ಪಾಡಿ ಚಾಲನೆ ನೀಡಲಿದ್ದಾರೆ.
ಮಹಿಳೆಯರಿಗೆ ತ್ರೋ ಬಾಲ್ ಹಗ್ಗಜಗ್ಗಾಟ ಪುರುಷರಿಗೆ ವಾಲಿ ಬಾಲ್ ಹಗ್ಗಜಗ್ಗಾಟ ಕ್ರಿಕೆಟ್ ಮತ್ತು ಪುಟಾಣಿ ಮಕ್ಕಳಿಗೆ ಭಾವಚಿತ್ರ ಸ್ಪರ್ಧೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.