ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ 2024 -25ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ 5 ವಿದ್ಯಾರ್ಥಿನಿಯರು ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿರುತ್ತಾರೆ.
ಕಬಕ ನಿವಾಸಿಯಾದ ಅಬ್ದುಲ್ ಆಸಿಫ್ ಪಿ. ಇವರ ಪತ್ನಿಯಾದ ರಹೀಮತ್ ನಿಶಾ ಇವರು ಹೋರಿಝೋನ್ ಆಂಗ್ಲ ಮಾದ್ಯಮ ಪಬ್ಲಿಕ್ ಶಾಲೆ ಮೇಗಿನಪೇಟೆ ವಿಟ್ಲ ಇಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ನೆಲ್ಯಾಡಿ ನಿವಾಸಿಯಾದ ಪೈಸಲ್ ವಿ. ಕೆ. ಇವರ ಪತ್ನಿಯಾದ ಫೈಸ. ಎಫ್ ಇವರು ಅಲ್ ಬದ್ರಿಯಾ ಆಂಗ್ಲ ಮಾದ್ಯಮ ಶಾಲೆ ನೆಲ್ಯಾಡಿ ಇಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ.

ಉಪ್ಪಿನಂಗಡಿ ನಿವಾಸಿಯಾದ ಅಬ್ದುಲ್ ಮಜೀದ್ ಮತ್ತು ಸಾಜಿದ ದಂಪತಿಗಳ ಪುತ್ರಿಯಾದ ಶಾಬಿರ ಇವರು ಅಲ್ ಮುನವ್ವರ ಎಜುಕೇಷನ್ ಸೆಂಟರ್ ಮೂಡಡ್ಕ ಇಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ದಾಸಕೋಡಿ ನಿವಾಸಿಯಾದ ಇಬ್ರಾಹಿಂ ಇವರ ಪುತ್ರಿಯಾದ ಫಾತಿಮತ್ ಆಫಿಯ ಇವರು ಸೌದಿ ಅರೇಬಿಯಾದ ಶಾಲೆಯಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ.
ಶೇಖಮಲೆ ನಿವಾಸಿಯಾದ ಜಾಕಿರ್ ಹುಸೇನ್ ಮತ್ತು ಕುಬ್ರಾ ದಂಪತಿಗಳ ಪುತ್ರಿಯಾದ ಝುಲ್ಫಾ ಇವರು ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಶಿಕ್ಷಕಿಯರಿಗೆ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ. ಹೇಮಲತಾ ಗೋಕುಲ್ನಾಥ್ ಹಾಗೂ ಸಂಚಾಲಕ ಗೋಕುಲ್ನಾಥ್ ಪಿ.ವಿ. ಇವರು ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿದರು.
2025-26 ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ದಾಖಲಾತಿ ಆರಂಭಗೊoಡಿರುತ್ತದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ. ಹೇಮಲತಾ ಗೋಕುಲ್ನಾಥ್ ಇವರು ಪ್ರಕಟಿಣೆಯಲ್ಲಿ ತಿಳಿಸಿರುತ್ತಾರೆ.