ವಿಟ್ಲ: ದ್ವಿಚಕ್ರ ಸವಾರನೋರ್ವನ ಮೇಲೆ ರಿಕ್ಷಾ ಚಾಲಕ ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆ ಒಡ್ಡಿದ ಘಟನೆ ಪಾಣೆಮಂಗಳೂರು ಪೇಟೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಸುನಿಲ್ ಎಂಬವರ ಮೇಲೆ ನಂದಾವರ ನಿವಾಸಿ ರಿಕ್ಷಾ ಚಾಲಕ ಅಝೀಲ್ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುನಿಲ್ ಮತ್ತು ಆತನ ಸ್ನೇಹಿತ ದಯಾನಂದ ರವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಹಲ್ಲೆ ನಡೆದಿದೆ.
ಪಾಣೆಮಂಗಳೂರು ಪೇಟೆಯಲ್ಲಿ ರಿಕ್ಷಾ ಚಾಲಕ ಅಝೀಲ್ ಯಾವುದೇ ಸೂಚನೆ ನೀಡದೆ ರಾಜರಸ್ತೆಗೆ ಏಕಾಏಕಿ ರಿಕ್ಷಾವನ್ನು ತಿರುಗಿಸಿದ್ದು, ಪಾಣೆಮಂಗಳೂರು ಪೇಟೆಯಿಂದ ನರಿಕೊಂಬು ಕಡೆಗೆ ಹೋಗುತ್ತಿದ್ದ ಸುನಿಲ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿತ್ತು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆರೋಪಿ ಅಝೀಲ್‌ರವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಠಾಣೆಗೆ ದೂರು ನೀಡಲಾಗಿದೆ.